ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ನಟ ಸಿದ್ಧಾರ್ಥ್ ಸದ್ಯ ‘ಟಕ್ಕರ್’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಸದ್ಯ ಸಿನಿಮಾದ ಕೆಲಸಗಳು ಕಂಪ್ಲೀಟ್ ಆಗಿದ್ದು ಚಿತ್ರದ ಪ್ರಮೋಷನ್ ಕೆಲಸಗಳಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಈ ಮಧ್ಯೆ ಕಮಲ್ ಹಾಸನ್ ನೋಡಿದ್ರೆ ನನಗೆ ಹೊಟ್ಟೆ ಕಿಚ್ಚು ಎಂದಿರುವ ನಟ, ಸಿನಿಮಾರಂಗದಲ್ಲಿ ನನ್ನನ್ನು ತುಳಿಯುವ ಪ್ರಯತ್ನ ನಡೆಯುತ್ತಿದೆ ಎಂದಿದ್ದಾರೆ.
ಬಾಯ್ಸ್ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ನಟ ಸಿದ್ದಾರ್ಥ್ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸ ಸೈ ಎನಿಸಿಕೊಂಡಿದ್ದಾರೆ. ಸಾಕಷ್ಟು ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಸಿದ್ದಾರ್ಥ್ ಇತ್ತೀಚೆಗೆ ಆಫರ್ ಗಳು ಕಮ್ಮಿಯಾಗೋಕೆ ಶುರುವಾಗಿತ್ತು. ಇದೀಗ ಮತ್ತೆ ಟಕ್ಕರ್ ಸಿನಿಮಾದ ಮೂಲಕ ಗ್ರ್ಯಾಂಡ್ ಕಂಬ್ಯಾಕ್ ಗೆ ರೆಡಿಯಾಗಿದ್ದಾರೆ.
ಜೂನ್ 9ಕ್ಕೆ ಟಕ್ಕರ್ ಸಿನಿಮಾ ರಿಲೀಸ್ ಆಗುತ್ತಿದ್ದು ಈ ಹಿನ್ನೆಲೆಯಲ್ಲಿ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ವಿವಿಧ ಸಂದರ್ಶನಗಳಲ್ಲಿ ಮಾತನಾಡಿರುವ ಸಿದ್ದಾರ್ಥ್, ಚಿತ್ರರಂಗದಲ್ಲಿ ತಮಗೆ ಹಿನ್ನಡೆ ಆಗುತ್ತಿದೆ. ಯಾಕೆ ಅಂತ ಗೊತ್ತಿಲ್ಲ, ನೇರವಾಗಿ ಹೇಳದೇ ಇದ್ದರೂ ಪರೋಕ್ಷವಾಗಿ ನನ್ನನ್ನು ಚಿತ್ರರಂಗದಲ್ಲಿ ತುಳಿಯಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಇಂಡಸ್ಟ್ರಿಯಲ್ಲಿ ಕೆಲವರು ನನ್ನ ಮೇಲೆ ಸಂಚು ರೂಪಿಸಿದ್ದಾರೆ ಎನ್ನುವ ಅರ್ಥದಲ್ಲಿ ಸಿದ್ಧಾರ್ಥ್ ಪ್ರತಿಕ್ರಿಯಿಸಿದ್ದಾರೆ
ನಟ ಕಮಲ್ ಹಾಸನ್ ಅವರನ್ನು ನೋಡಿದ್ರೆ ನನಗೆ ಹೊಟ್ಟೆ ಕಿಚ್ಚು. ಯಾಕಂದ್ರೆ ಅವರು ಹೀರೋ ಆದ ಸಂದರ್ಭದಲ್ಲಿ ತೆಲುಗಿನ ಖ್ಯಾತ ನಿರ್ದೇಶಕರ ಜೊತೆ ಅವರು ಸಿನಿಮಾ ಮಾಡಿದರು. ಅವರಿಗೆ ಸಿಕ್ಕ ಅವಕಾಶಗಳು ನನಗೆ ಸಿಗಲಿಲ್ಲ. ಆ ಸಮಯಲ್ಲಿ ನನ್ನ ಪ್ರತಿಭೆ ದೊಡ್ಡ ನಿರ್ದೇಶಕರಿಗೆ ಗೊತ್ತಾಗಲಿಲ್ಲ ಅಂತ ನಾನು ಹೇಳ್ತೀನಿ. ಫೀಕ್ನಲ್ಲಿ ಇದ್ದಾಗಲೇ ನನ್ನ ಪ್ರತಿಭೆ ಯಾರಿಗೂ ಗೊತ್ತಾಗಲಿಲ್ಲ ಎಂದು ಸಿದ್ಧಾರ್ಥ್ ಬೇಸರ ವ್ಯಕ್ತಪಡಿಸಿದ್ದಾರೆ.