ತಮಿಳು ಚಿತ್ರರಂಗದ ಸ್ಟಾರ್ ದಂಪತಿಗಳಲ್ಲಿ ಸೂರ್ಯ ಹಾಗೂ ಜೋತಿಕಾ ಕೂಡ ಒಬ್ಬರು. ಮದುವೆಯಾದ ಬಳಿಕವೂ ಜೋತಿಕಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪತಿ, ಮಕ್ಕಳು, ಮನೆಯ ಜೊತೆಗೆ ಬಣ್ಣದ ಬದುಕಿನ ನಂಟನ್ನೂ ಹಾಗೆ ಉಳಿಸಿಕೊಂಡಿದ್ದಾರೆ. ತನಗಾಗಿ ಹಾಗೂ ತನ್ನ ಕುಟುಂಬಕ್ಕಾಗಿ ಹಗಲು ರಾತ್ರಿ ದುಡಿದ ಜೋತಿಕಾಗಾಗಿ ಇದೀಗ ಸೂರ್ಯ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ. ಈ ನಿರ್ಧರ ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ.
ಸ್ಟಾರ್ ನಟ ಸೂರ್ಯ ತಮ್ಮ ಪತ್ನಿಗಾಗಿ ನಿರ್ಣಾಯಕ ನಿರ್ಧಾರ ತೆಗೆದುಕೊಂಡಿದ್ದಾರೆ. ಹೆಂಡತಿ ತನ್ನ ಪತಿಗಾಗಿ ತ್ಯಾಗ ಮಾಡುತ್ತಾಳೆ, ಆದರೆ ಸೂರ್ಯ ಈಗ ತನ್ನ ಹೆಂಡತಿಗಾಗಿ ತ್ಯಾಗ ಮಾಡಲು ಮುಂದಾಗಿದ್ದು ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.
ಸ್ಟಾರ್ ಹೀರೋ ಸೂರ್ಯ ಹುಟ್ಟಿ ಬೆಳೆದದ್ದು ಚೆನ್ನೈನಲ್ಲಿ. ಚೆನ್ನೈನಲ್ಲಿರುವ ಡಾ.ರಾಜ್ ಕುಮಾರ್ ಅವರ ಮನೆ ಸೂರ್ಯ ಅವರ ಮನೆಯ ಪಕ್ಕದಲ್ಲಿದೆ. ನಟನಾದ ನಂತರ ಸೂರ್ಯ ಮುಂಬೈ ಮೂಲದ ನಟಿ ಜ್ಯೋತಿಕಾರನ್ನು ವಿವಾಹವಾದರು. ಆ ಸಮಯದಲ್ಲಿ ಜ್ಯೋತಿಕಾ ದೊಡ್ಡ ನಟಿಯಾಗಿ ಗುರುತಿಸಿಕೊಂಡಿದ್ದರು. ಹಿಂದಿ, ಕನ್ನಡ ಅಲ್ಲದೆ ಹಲವು ಭಾಷೆಗಳಲ್ಲಿ ನಾಯಕಿಯಾಗಿ ನಟಿಸಿದ್ದರು. ಸೂರ್ಯ ಜೊತೆ ಮದುವೆಯಾದ ನಂತರ ಜ್ಯೋತಿಕಾ ಮುಂಬೈ ಬಿಟ್ಟು ಚೆನ್ನೈನಲ್ಲಿ ನೆಲೆಸಿದ್ದರು.
ಸೂರ್ಯನನ್ನು ಮದುವೆಯಾಗುವ ಮೊದಲು ಜ್ಯೋತಿಕಾ ಎರಡು ದಶಕಗಳಿಗೂ ಹೆಚ್ಚು ಕಾಲ ಮುಂಬೈನಲ್ಲಿ ವಾಸಿಸುತ್ತಿದ್ದರು. ಆದರೆ ಈಗ ಜ್ಯೋತಿಕಾಗಾಗಿ ಸೂರ್ಯ ಚೆನ್ನೈನಿಂದ ಮುಂಬೈಗೆ ಶಿಫ್ಟ್ ಆಗಿದ್ದಾರೆ. ಸದ್ಯ ಸೂರ್ಯ ಮುಂಬೈನಲ್ಲಿ ನೆಲೆಸಿದ್ದಾರೆ. ಈ ಕುರಿತು ಅನುಪಮಾ ಚೋಪ್ರಾ ಸಂದರ್ಶನದಲ್ಲಿ ಮಾತನಾಡಿದ ಸೂರ್ಯ, ‘ಜ್ಯೋತಿಕಾ ಎರಡು ದಶಕಗಳ ಕಾಲ ಮುಂಬೈನಲ್ಲಿ ವಾಸವಿದ್ದರು. ನನಗಾಗಿ ಮುಂಬೈ ಬಿಟ್ಟಿದ್ರು.. ಆದರೆ ಈಗ ಜ್ಯೋತಿಕಾಗಾಗಿ ಮುಂಬೈಗೆ ಶಿಫ್ಟ್ ಆಗಿದ್ದೇನೆ. ಪ್ರತಿ ಬಾರಿಯೂ ಹೆಂಡತಿ ಏಕೆ ತ್ಯಾಗ ಮಾಡಬೇಕು, ಈ ಒಂದು ಸಣ್ಣ ತ್ಯಾಗ ಮಾಡುವ ಉದ್ದೇಶದಿಂದ ನಾನು ಮುಂಬೈಗೆ ಶಿಫ್ಟ್ ಆಗಿದ್ದೇನೆ,’ ಎಂದಿದ್ದಾರೆ.
ಸೂರ್ಯ ಪತ್ನಿ ಜ್ಯೋತಿಕಾ ಕೂಡ ಹಲವು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ಜ್ಯೋತಿಕಾ ಹಿಂದಿಯ ‘ಶ್ರೀಕಾಂತ್’ ಮತ್ತು ‘ಶೈತಾನ್’ ಸಿನಿಮಾಗಳಲ್ಲಿ ನಟಿಸಿದ್ದರು. ಈಗ ‘ಡಬ್ಬಕಾರ್ಟೆಲ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಕಳೆದ ವರ್ಷದ ಕಾದಲ್ ಮತ್ತು ಮಲಯಾಳಂ ಚಿತ್ರ ದಿ ಕೋರ್ನಲ್ಲಿ ಜ್ಯೋತಿಕಾ ಅವರ ಅಭಿನಯವು ಪ್ರಶಂಸೆಯನ್ನು ಗಳಿಸಿತು. ಈ ನಡುವೆ ಸೂರ್ಯ ಅಭಿನಯದ ‘ಕಂಗುವ’ ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ.