ರೀಲ್ಸ್ ಗಳ ಮೂಲಕ ಖ್ಯಾತಿ ಘಳಿಸಿ ಬಳಿಕ ಬೃಂಧಾವನ ಧಾರವಾಹಿ ಮೂಲಕ ಸ್ಮಾಲ್ ಸ್ಕ್ರೀನ್ ಗೆ ಎಂಟ್ರಿಕೊಟ್ಟಿದ್ದ ನಟ ವರುಣ್ ಆರಾಧ್ಯ ವಿರುದ್ಧ ಮಾಜಿ ಪ್ರೇಯಸಿ ಗಂಭೀರ ಆರೋಪ ಮಾಡಿದ್ದರು. ವರುಣ್ ತನ್ನ ಖಾಸಗಿ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾನೆ ಎಂದು ದೂರು ನೀಡಿದ್ದರು. ಆದರೆ ಇದೀಗ ವರುಣ್ ಆರಾಧ್ಯ ಹಾಗೂ ಮಾಜಿ ಪ್ರೇಯಸಿ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವನ್ನು ಶೇರ್ ಮಾಡಿ ಇದೇಲ್ಲಾ ಸುಳ್ಳು ಸುದ್ದಿ ಅಂತ ಹೇಳುತ್ತಿದ್ದಾರೆ.
ಇದೀಗ ವರುಣ್ ಆರಾಧ್ಯ ವಿರುದ್ಧ ಮಾಜಿ ಪ್ರೇಯಸಿ ಪೊಲೀಸ್ ಅಧಿಕಾರಿಗೆ ದೂರು ಸಲ್ಲಿಸಿದ FIRನಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. 4 ವರ್ಷಗಳ ಹಿಂದೆ ಸೋಷಿಯಲ್ ಮೀಡಿಯಾ ಮೂಲಕ ಪರಿಚಯವಾಗಿದ್ದ ವರುಣ್ ಆರಾಧ್ಯ ತನ್ನನ್ನ ಪ್ರೀತಿಸಿ ವಂಚಿಸಿದ್ದಾನೆ. ನಾನು ವರುಣ್ ಫೋನ್ನಲ್ಲಿ ಆತ ಬೇರೆ ಯುವತಿ ಜೊತೆಗಿರೋ ಖಾಸಗಿ ಫೋಟೋ ನೋಡಿದೆ. ಇದನ್ನ ಪ್ರಶ್ನೆ ಮಾಡಿದ್ದಕ್ಕೆ ನಮ್ಮಿಬ್ಬರ ಲವ್ ಬ್ರೇಕಪ್ ಆಗಿತ್ತು. ಲವ್ ಬ್ರೇಕಪ್ ಆಗುತ್ತಿದ್ದಂತೆ ವರುಣ್ ನನ್ನ ಬ್ಲ್ಯಾಕ್ ಮೇಲ್ ಮಾಡ್ತಿದ್ದಾನೆ. ಖಾಸಗಿ ಫೋಟೋಗಳ ಬಗ್ಗೆ ಎಲ್ಲೂ ಬಾಯ್ಬಿಡದಂತೆ ನನಗೆ ಧಮ್ಕಿ ಹಾಕಿದ್ದಾನೆ. ಅಷ್ಟೇ ಅಲ್ಲ 2023ರ ಸೆಪ್ಟೆಂಬರ್ 10ನೇ ತಾರೀಕು ವರುಣ್ ವಾಟ್ಸ್ಆ್ಯಪ್ ನಂಬರ್ನಿಂದ ವಾಟ್ಸ್ಆ್ಯಪ್ ನಂಬರ್ಗೆ ನನ್ನ ಖಾಸಗಿ ಫೋಟೋವನ್ನು ಕಳುಹಿಸಿದ್ದಾನೆ. ಇದನ್ನು ನೋಡಿ ಶಾಕ್ ಆಗಿ, ಈ ರೀತಿ ಯಾಕೆ ಕಳುಹಿಸುತ್ತಿದ್ದೀಯಾ ಅಂತ ನಾನು ಕೇಳಿದ್ದೆ. ತನ್ನ ಹತ್ತಿರ ಇನ್ನೂ ಹೆಚ್ಚಿನ ಖಾಸಗಿ ಫೋಟೋ ಮತ್ತು ವಿಡಿಯೋಗಳಿವೆ. ಅವುಗಳನ್ನು ನಾನು ಸೋಷಿಯಲ್ ಮೀಡಿಯಾದಲ್ಲಿ ಹರಿ ಬಿಡ್ತೀನಿ ಅಂತ ನನಗೆ ಬೆದರಿಕೆ ಹಾಕಿ, ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ.
ಆದರೆ ಇದೀಗ ಮಾಜಿ ಪ್ರೇಯಸಿ ಉಲ್ಟಾ ಹೊಡೆದಿದ್ದಾರೆ. ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸ್ಟೋರಿವೊಂದನ್ನು ಶೇರ್ ಮಾಡಿ ಇದೇಲ್ಲಾ ಸುಳ್ಳು ಸುದ್ದಿ ಅಂತಾ ಮೀಡಿಯಾ ಮೇಲೆ ಗೂಬೆ ಕುರಿಸಿದ್ದಾರೆ. ಇದು ಮಾಧ್ಯಮಗಳ ಮೂಲಕ ನೀವು ನೋಡುತ್ತಿರುವ ಸುಳ್ಳು ಮಾಹಿತಿಯಾಗಿದೆ. ಇದು ಇನ್ಸ್ಟಾಗ್ರಾಮ್ ಪ್ರೊಫೈಲ್ ಮತ್ತು ಇತರ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಿಂದ ಎಲ್ಲಾ ರೀಲ್ಗಳನ್ನು ತೆಗೆದುಹಾಕುವುದರ ಕುರಿತು ನಕಲಿ ಸುದ್ದಿಗಳನ್ನು ಹರಡುವುದನ್ನು ನಿಲ್ಲಿಸಿ ಅಂತ ಬರೆದಿಕೊಂಡಿದ್ದಾರೆ.
ಈ ಬಗ್ಗೆ ಸಂದರ್ಶನವೊಂದಲ್ಲಿ ಮಾತಾಡಿದ ಯುವತಿ, ನನಗೆ ಗೊತ್ತಿರಲಿಲ್ಲ ನಾನು ಎಫ್ಐಆರ್ ಹಾಕಿದ ಮೇಲೆ ಟಿವಿಯಲ್ಲಿ ಟೆಲಿಕಾಸ್ಟ್ ಆಗುತ್ತೆ ಅಂಥ. ಈ ಬಗ್ಗೆ ಅಲ್ಲಿ ಇರೋ ಅಧಿಕಾರಿಗಳಿಗೆ ನಾನು ಕೇಳಿದೆ ಈ ವಿಚಾರ ಎಲ್ಲೂ ಹೊರಗಡೆ ಬರೋದಿಲ್ವಾ ಅಂತ. ಅವರು ಕೂಡ ಈ ವಿಚಾರ ಎಲ್ಲೂ ಆಚೆ ಬರೋದಿಲ್ಲ ಅಂತ. ಆದರೆ ಅದು ಹೇಗೆ ಆಚೆ ಬಂತು ಅಂತ ನನಗೆ ಗೊತ್ತಿಲ್ಲ ಎಂದು ವರುಣ್ ಮಾಜಿ ಪ್ರೇಯಸಿ ಹೇಳಿದ್ದಾರೆ.