ಸ್ಯಾಂಡಲ್ವುಡ್ ನಟ ವಸಿಷ್ಠ ಸಿಂಹಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಆದರೆ ಈ ಭಾರಿಯ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿರಲು ವಸಿಷ್ಠ ಸಿಂಹ ನಿರಾಕಸಿದ್ದಾರೆ. ನಾನು ಈ ಬಾರಿ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ತಿಲ್ಲ ಎಂದು ಅಭಿಮಾನಿಗಳಿಗೆ ನಟ ಸೋಶಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ.
ಪ್ರೀತಿ ಪಾತ್ರರಿಗೆ ಎಲ್ಲರಿಗೂ ನಮಸ್ಕಾರ, ಅಕ್ಟೋಬರ್ 19ನೇ ತಾರೀಕು ನನ್ನ ಹುಟ್ಟುಹಬ್ಬ. ಈ ಸಲ ಯಾವುದೇ ತರಹ ಆಚರಣೆ ಇರೋದಿಲ್ಲ. ಹಾಗಾಗಿ ನನ್ನ ಪ್ರೀತಿ ಪಾತ್ರರು ನೀವಿರುವ ಜಾಗದಿಂದಲೇ ಹಾರೈಸಿ ಅಂತ ವಿನಂತಿಸಿಕೊಳ್ಳುತ್ತೇನೆ. ಕ್ಷಮಿಸಿ ಈ ವರ್ಷ ಸಿಗೋದಿಲ್ಲ. ಮುಂದಿನ ವರ್ಷ ಖಂಡಿತವಾಗಿಯೂ ಸಿಗೋಣ ಎಂದು ವಸಿಷ್ಠ ಸಿಂಹ ವಿಡಿಯೋದಲ್ಲಿ ಮನವಿ ಮಾಡಿದ್ದಾರೆ.
ವಸಿಷ್ಠ ಸಿಂಹ ಕನ್ನಡದ ಜೊತೆಗೆ ತೆಲುಗು ಸಿನಿಮಾಗಳಲ್ಲಿ ಆ್ಯಕ್ಟೀವ್ ಆಗಿದ್ದಾರೆ. ತೆಲುಗಿನಲ್ಲಿಯೂ ಅವರಿಗೆ ಉತ್ತಮ ಅವಕಾಶಗಳು ಅರಸಿ ಬರುತ್ತಿವೆ. ಈ ಮಧ್ಯೆ ವಸಿಷ್ಠ ಸಿಂಹ ತಂದೆಯಾಗುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು ಇದಕ್ಕೆ ವಸಿಷ್ಠ ಸಿಂಹ ಯಾವುದೇ ಪ್ರಿತಕ್ರಿಯೆ ನೀಡಿಲ್ಲ.