ಸ್ಯಾಂಡಲ್ ವುಡ ನಟಿ ಐಂದ್ರಿತಾ ರೇ ಮದುವೆಯಾದ ಬಳಿಕ ಸಿನಿಮಾ ರಂಗದಿಂದ ಸಂಪೂರ್ಣವಾಗಿ ದೂರವೇ ಉಳಿದಿದದಾರೆ. ಇದೀಗ ಬಿಕಿನಿ ತೊಟ್ಟುಕೊಂಡಿರುವ ಫೋಟೋ ಶೇರ್ ಮಾಡಿ ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ. ಬಿಕಿನಿಯಲ್ಲಿ ನಟಿ ಹಾಟ್ ಆಗಿ ಪೋಸ್ ನೀಡಿ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡ್ತಿದ್ದಾರೆ.
ಬಿಕಿನಿ ಫೋಟೋ ಶೇರ್ ಮಾಡಿದ ನಟಿ, ಮಳೆಗಾಲ ಬಹುತೇಕ ಮುಗಿದಿದೆ ಎಂದು ನೀವು ಭಾವಿಸಿದಾಗ ಎಂದು ಕ್ಯಾಪ್ಷನ್ ನೀಡಿದ್ದಾರೆ. ನಟಿಯ ಲುಕ್ಗೆ ಸೋ ಬ್ಯೂಟಿಫುಲ್ ಎಂದು ಕೆಲವರು ಕಾಮೆಂಟ್ ಮಾಡಿದ್ರೆ ಮತ್ತೊಂದಷ್ಟು ಮಂದಿ ನೆಗಿಟಿವ್ ಕಾಮೆಂಟ್ ಹಾಕಿದ್ದಾರೆ. ಐಂದ್ರಿತಾ ಬಿಕಿನಿ ಧರಿಸಿರುವ ಎರಡ ಫೋಟೋಗಳನ್ನು ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಅಂದಹಾಗೆ, ಐಂದ್ರಿತಾ ರೇ ಇದೀಗ ಹೇಳಿಕೊಳ್ಳುವಂತಹ ಸಿನಿಮಾ ಅವಕಾಶಗಳು ಸಿಗುತ್ತಿಲ್ಲ. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಅವರು ಮದುವೆಯಾದ್ಮೇಲೆ ನನಗೆ ಸಿನಿಮಾ ಆಫರ್ಸ್ ಕಮ್ಮಿಯಾಗಿದೆ. ನನಗೆ ಸಿನಿಮಾಗಳು ಸಿಕ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.