ಬಾಲಿವುಡ್ ಬ್ಯೂಟಿ ಆಲಿಯಾ ಭಟ್ ಸದ್ಯ ಹಾಲಿವುಡ್ಗೆ ಎಂಟ್ರಿಕೊಟ್ಟಿದ್ದಾರೆ. ಆಲಿಯಾ ನಟಿಸಿರೋ ಮೊದಲ ಸಿನಿಮಾ ಹಾರ್ಟ್ ಆಫ್ ಸ್ಟೋನ್ ರಿಲೀಸ್ಗೆ ರೆಡಿಯಿದೆ. ಸದ್ಯ ಸಿನಿಮಾದ ಆಲಿಯಾ ಲುಕ್ ರಿಲೀಸ್ ಆಗಿದ್ದು ಸಾಮಾಜಿಕ ಜಾಲಾ ತಾಣದಲ್ಲಿ ವೈರಲ್ ಆಗಿದೆ.
ಸಿನಿಮಾ ರಂಗದ ಉತ್ತುಂಗದಲ್ಲಿರುವಾಗ್ಲೆ ರಣ್ಬೀರ್ ಕಪೂರ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆಲಿಯಾ ಭಟ್ ಮಗುವಾದ ಬಳಿಕವೂ ಸಖತ್ ಡಿಮ್ಯಾಂಡ್ ಕಾಯ್ದುಕೊಂಡಿದ್ದಾರೆ. ಆಲಿಯಾ ಪ್ರೆಗ್ನೆಂಟ್ ಇರುವಾಗ್ಲೂ ಹಾಲಿವುಡ್ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿ ಸುದ್ದಿಯಾಗಿದ್ದರು. ಹಾಲಿವುಡ್ ಖ್ಯಾತ ನಟಿ ಗಾಲ್ ಗಡೋಟ್ ಮುಂದೆ ಆಲಿಯಾ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಹಿಂದೆಂದೂ ಕಾಣಿಸಿಕೊಂಡಿರದ ಪಾತ್ರದಲ್ಲಿ ಆಲಿಯಾ ನಟಿಸಿದ್ದಾರೆ.
‘ಹಾರ್ಟ್ ಆಫ್ ಸ್ಟೋನ್’ ಸಿನಿಮಾದಲ್ಲಿ ಆಲಿಯಾ ಭಟ್ ಅವರು ಕಿಯಾ ಧವನ್ ಎಂಬ ಪಾತ್ರ ಮಾಡಿದ್ದಾರೆ. ಸದ್ಯ ಸಿನಿಮಾದ ಫಸ್ಟ್ ಲುಕ್ ರಿವೀಲ್ ಆಗಿದ್ದು ಆಲಿಯಾ, ತಲೆ ಕೂದಲು ಯಾವುದು? ಧರಿಸಿದ ಕೋಟ್ ಯಾವುದು ಎಂಬ ವ್ಯತ್ಯಾಸವೇ ತಿಳಿಯದ ರೀತಿಯಲ್ಲಿ ಅವರ ಗೆಟಪ್ ಪೋಸ್ಟರ್ನಲ್ಲಿದೆ. ಆಲಿಯಾ ಭಟ್ ಲುಕ್ ನೋಡಿ ಅಭಿಮಾನಿಗಳು ಅಚ್ಚರಿಪಟ್ಟಿದ್ದಾರೆ.
ಹಾಲಿವುಡ್ ಸಿನಿಮಾಗಳಲ್ಲಿ ನಟಿಸುವ ಅವಕಾಶ ಪಡೆದ ಭಾರತೀಯ ಕಲಾವಿದರ ಸಂಖ್ಯೆ ಬಹಳ ಕಡಿಮೆ. ಇರ್ಫಾನ್ ಖಾನ್, ಡಿಂಪಲ್ ಕಪಾಡಿಯಾ, ದೀಪಿಕಾ ಪಡುಕೋಣೆ, ಐಶ್ವರ್ಯಾ ರೈ, ಪ್ರಿಯಾಂಕಾ ಚೋಪ್ರಾ ಸೇರಿದಂತೆ ಕೆಲವೇ ಕೆಲವು ಮಂದಿ ಮಾತ್ರ ಅಂಥ ಚಾನ್ಸ್ ಪಡೆದುಕೊಂಡಿದ್ದರು. ಈಗ ಆಲಿಯಾ ಭಟ್ ಕೂಡ ಹಾಲಿವುಡ್ನಲ್ಲಿ ತಮ್ಮ ಛಾಪು ಮೂಡಿಸಲು ರೆಡಿಯಾಗಿದ್ದಾರೆ. ಆಗಸ್ಟ್ 11ಕ್ಕೆ ಒಟಿಟಿಯಲ್ಲಿ ರಿಲೀಸ್ ಆಗಲಿದೆ.