ತೆರೆ ಮೇಲೆ ಬೆಸ್ಟ್ ಜೋಡಿಯಾಗಿ ಮಿಂಚಿರೋ ಸ್ಯಾಂಡಲ್ ವುಡ್ ನ ನಟ ಡಾಲಿ ಧನಂಜಯ್ ಹಾಗೂ ನಟಿ ಅಮೃತಾ ಅಯ್ಯಂಗರ್ ಗೆ ಸಾಕಷ್ಟು ಅಭಿಮಾನಿಗಳ ಬಳಗವಿದೆ. ಸಿನಿಮಾದಲ್ಲಿ ಮಾತ್ರವಲ್ಲ, ನಿಜ ಜೀವನದಲ್ಲೂ ಈ ಜೋಡಿ ಒಂದಾದರೆ ಚೆನ್ನಾಗಿರುತ್ತೆ ಎಂದು ಅಭಿಮಾನಿಗಳ ಆಸೆಯಾಗಿದೆ. ಅಲ್ಲದೆ ಇಬ್ಬರ ನಡುವೆ ಸಮ್ ಥಿಂಗ್ ಸಮ್ ಥಿಂಗ್ ಇದೆ ಎಂದು ಹೇಳಲಾಗುತ್ತಿದೆ. ಇದೀಗ ತಮ್ಮಿಬ್ಬರ ಸ್ನೇಹದ ಕುರಿತು ನಟಿ ಅಮೃತಾ ಸ್ಪಷ್ಟನೆ ನೀಡಿದ್ದಾರೆ.
‘ಪಾಪ್ ಕಾರ್ನ್ ಮಂಕಿ ಟೈಗರ್’, ಬಡವ ರಾಸ್ಕಲ್, ಹೊಯ್ಸಳ ಸಿನಿಮಾದಲ್ಲಿ ಡಾಲಿ ಹಾಗೂ ಅಮೃತಾ ಒಟ್ಟಿಗೆ ನಟಿಸಿದ್ದಾರೆ. ಸಿನಿಮಾದಲ್ಲಿ ಇಬ್ಬರ ಕೆಮಿಸ್ಟ್ರಿ ಜನರಿಗೆ ಇಷ್ಟವಾಗಿದ್ದು, ಬಳಿಕ ಇಬ್ಬರ ಕುರಿತು ಗಾಸಿಪ್ ಕೂಡ ಹರಡಿತ್ತು. ಇಬ್ಬರು ಡೇಟ್ ಮಾಡ್ತಿದ್ದಾರೆ ಎನ್ನಲಾಗಿತ್ತು.
ಡಾಲಿ- ಅಮೃತಾ ಡೇಟಿಂಗ್ ಮಾಡ್ತಿದ್ದಾರಾ ಎಂಬ ಪ್ರಶ್ನೆಗೆ ಅಮೃತಾ ಸಂದರ್ಶನವೊಂದರಲ್ಲಿ ಸ್ಪಷ್ಟನೆ ನೀಡಿದ್ದಾರೆ. ನನಗೆ ಗೊತ್ತು ಅಭಿಮಾನಿಗಳು ನನ್ನ ಮತ್ತು ಡಾಲಿ ಜೋಡಿಯನ್ನ ತೆರೆಯ ಮೇಲೆ ನೋಡೋದಕ್ಕೆ ಇಷ್ಟಪಡ್ತಾರೆ ಅಂತಾ. ನಾವು ಮೂರು ಸಿನಿಮಾಗಳನ್ನ ಒಟ್ಟಿಗೆ ಮಾಡಿದ್ದೇವೆ. ಹಾಗಾಗಿ ನಮ್ಮನ್ನ ನೋಡಿ ನಮ್ಮ ನಡುವೆ ಏನೋ ಇದೆ ಅಂತಾ ಊಹೆ ಮಾಡುತ್ತಾರೆ.
ತೆರೆಮೇಲಿನ ಕೆಮಿಸ್ಟ್ರಿಗಿಂತ ತೆರೆಹಿಂದೆ ಬೇರೇ ಏನೋ ಇದೆ ಅಂತಾ ನಮ್ಮ ಬಗ್ಗೆ ಯೋಚಿಸುತ್ತಾರೆ. ನಾನು ಡಾಲಿ ಅವರೊಂದಿಗೆ ಕೆಲಸ ಮಾಡಲು ಕಂಫರ್ಟ್ ಆಗಿದ್ದೇನೆ. ನಮ್ಮ ನಡುವೆ ಒಳ್ಳೆಯ ಸ್ನೇಹವಿದೆ ಎಂದಿದ್ದಾರೆ. ನಾನಿನ್ನೂ ಸಿಂಗಲ್ ಆಗಿದ್ದೇನೆ ಎಂದು ಹೇಳುವ ಮೂಲಕ ಡಾಲಿ ಜೊತೆಗಿನ ಡೇಟಿಂಗ್ ವದಂತಿಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.