ಪತಿ ಜೊತೆ ನಟಿ ಅಮೂಲ್ಯ ಕ್ಯೂಟ್ ಫೋಟೋ ಶೂಟ್

ಫೋಟೋ ಗ್ಯಾಲರಿ

ಸ್ಯಾಂಡಲ್ ವುಡ್ ಗೋಲ್ಡನ್ ಕ್ವೀನ್ ನಟಿ ಅಮೂಲ್ಯ ಹಾಗೂ ಜಗದೀಶ್ ದಂಪತಿ ಇತ್ತೀಚೆಗೆ ತಮ್ಮ ಅವಳಿ ಮಕ್ಕಳ ಅದ್ದೂರಿ ನಾಮಕರಣ ಮಾಡಿದ್ದಾರೆ.

ನಾಮಕರಣ ಶಾಸ್ತ್ರದ ಸಂದರ್ಭದಲ್ಲಿ ಅಮೂಲ್ಯ ಹಾಗೂ ಜಗದೀಶ್ ಸುಂದರವಾಗಿ ಫೋಟೋ ಶೂಟ್ ಮಾಡಿಸಿದ್ದಾರೆ.

ಅಮೂಲ್ಯ ಹಾಗೂ ಜಗದೀಶ್ ಫೋಟೋ ನೋಡಿ ಅಭಿಮಾನಿಗಳು ಕ್ಯೂಟ್ ಕಪಲ್ಸ್ ಎಂದು ಕಾಮೆಂಟ್ ಮಾಡಿದ್ದಾರೆ.

ಅಮೂಲ್ಯ ಸುಂದರವಾದ ಝರಿ ಸೀರೆಯುಟ್ಟಿದ್ದು ಕೆಂಪು ಬಣ್ಣದ ಹೆವಿ ವರ್ಕ್ ಬ್ಲೌಸ್ ಧರಿಸಿದ್ದರು. ಇದಕ್ಕೆ ಗ್ರೀನ್ ಸ್ಟೋನ್ ಇರುವ ಆಭರಣ ಧರಿಸಿ ಮಿಂಚಿದ್ದಾರೆ.

ಅಮೂಲ್ಯ ಅವರ ಪತಿ ಕೂಡ ಪತ್ನಿ ಉಡುಪಿಗೆ ಮ್ಯಾಚ್ ಆಗುವಂತೆ ತಿಳಿ ನೇರಳೆ ಬಣ್ಣದ ಕುರ್ತಾ ಹಾಗೂ ಅದರ ಮೇಲೆ ಕೆಂಪು ಬಣ್ಣದ ಜಾಕೆಟ್ ಧರಿಸಿದ್ದರು.

ನಾಮಕರಣ ಕಾರ್ಯಕ್ರಮದಲ್ಲಿ ಅಮ್ಮು ಸುಂದರವಾಗಿ ರೆಡಿಯಾಗಿ ಪತಿಯೊಂದಿಗೆ ಫೋಟೋ ಶೂಟ್ ಮಾಡಿಸಿಕೊಂಡಿದ್ದು ಫೋಟೋ ನೋಡಿ ಅಭಿಮಾನಿಗಳು ವಾವ್ ಅಂತಿದ್ದಾರೆ.

ನಟಿ ಇತ್ತೀಚೆಗೆ ಸುಂದರವಾದ ಲಂಗ ದಾವಣಿ ಧರಿಸಿ ದೀಪಾವಳಿಗೆ ರೆಡಿಯಾಗಿದ್ದರು. ಸ್ಟೈಲಿಷ್ ಲುಕ್​ನಲ್ಲಿ ಅಮೂಲಲ್ಯ ದೀಪಗಳ ಮಧ್ಯೆ ಕಂಗೊಳಿಸಿದ್ದರು.