ಬಾಲಿವುಡ್ ನಟಿ ಅನಿತಾ ಹಸ್ಸನಂದನಿ ಬರೋಬ್ಬರಿ 8 ವರ್ಷಗಳ ಬಳಿಕ ತೆಲುಗಿಗೆ ಕಮ್ಬ್ಯಾಕ್ ಮಾಡಿದ್ದಾರೆ. ತೆಲುಗಿನ ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಡುವ ಮೂಲಕ ಮತ್ತೆ ದಕ್ಷಿಣ ಭಾರತದ ಚಿತ್ರರಂಗಕ್ಕೆ ನಟಿ ಎಂಟ್ರಿಕೊಡ್ತಿದ್ದಾರೆ.
‘ಓ ಭಾಮಾ ಅಯ್ಯೋ ರಾಮ’ ಚಿತ್ರದ ಮೂಲಕ ಅನಿತಾ ಟಾಲಿವುಡ್ ಅಂಗಳಕ್ಕೆ ರೀಎಂಟ್ರಿ ಕೊಡುತ್ತಿದ್ದಾರೆ. ತೆಲುಗು ನಟ ಸುಹಾಸ್ ಮತ್ತು ಮಾಳವಿಕಾ ಮನೋಜ್ ಜೋಡಿಯಾಗಿ ನಟಿಸುತ್ತಿದ್ದು, ಚಿತ್ರದ ಮುಹೂರ್ತ ಕಾರ್ಯಕ್ರಮವು ಹೈದರಾಬಾದ್ ನಲ್ಲಿ ಸರಳವಾಗಿ ನಡೆದಿದೆ.
‘ಓ ಭಾಮಾ ಅಯ್ಯೋ ರಾಮ’ ಚಿತ್ರವು ಪಕ್ಕಾ ಲವ್ ಸ್ಟೋರಿಯಾಗಿದ್ದು ಚಿತ್ರದಲ್ಲಿ ಅನಿತಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ಅನಿತಾ ಪಾತ್ರದಿಂದ ಟ್ವಿಸ್ಟ್ ಸಿಗಲಿದೆಯಂತೆ. ಚಿತ್ರದ ಕಥೆ ಮತ್ತು ಪಾತ್ರಕ್ಕೆ ಇರುವ ಪ್ರಾಮುಖ್ಯತೆ ನೋಡಿ ಇಷ್ಟವಾಗಿ ಸಿನಿಮಾದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರಂತೆ.
ಚಿತ್ರವನ್ನು ರಾಮ್ ಗೋಧಾಲ ನಿರ್ದೇಶನ ಮಾಡುತ್ತಿದ್ದಾರೆ. ಹರೀಶ್ ನಲ್ಲ ಮತ್ತು ಪ್ರದೀಪ್ ತಲ್ಲಪು ರೆಡ್ಡಿ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಕನ್ನಡದ ‘ವೀರಕನ್ನಡಿಗ’ ಚಿತ್ರದಲ್ಲಿ ಪುನೀತ್ ರಾಜ್ಕುಮಾರ್ಗೆ ಜೋಡಿಯಾಗಿ ಅನಿತಾ ಕಾಣಿಸಿಕೊಂಡಿದ್ದರು.