ಬಾಲಿವುಡ್ ಬ್ಯೂಟಿ ನಟಿ ದೀಪಿಕಾ ಪಡುಕೋಣೆ ಭಾರತೀಯ ಚಿತ್ರರಂಗವನ್ನು ಪ್ರತಿನಿಧಿಸಿ ಆಸ್ಕರ್ ಅವಾರ್ಡ್ನಲ್ಲಿ ನಿರೂಪಣೆ ಮಾಡಿದ್ದರು. ʻನಾಟು ನಾಟುʼ ಹಾಡಿನ ಬಗ್ಗೆ ಮೆಚ್ಚುಗೆ ಸೂಚಿಸಿ, ಹಾಡಿನ ವಿಶೇಷತೆಯನ್ನು ದೀಪಿಕಾ ವಿವರಿಸಿದರು. ಇದೀಗ ಆಸ್ಕರ್ ಸಮಾರಂಭದಲ್ಲಿ ನಟಿ ಬೋಲ್ಡ್ ಲುಕ್ನಿಂದ ಕಂಗೊಳಿಸಿದ್ದು, ಸದ್ಯ ದೀಪಿಕಾ ಫೋಟೋಶೂಟ್ ವೈರಲ್ ಆಗಿದೆ.
ಹಿಂದಿ ಚಿತ್ರರಂಗದಲ್ಲಿ ಸ್ಟಾರ್ ನಟಿಯರಲ್ಲಿ ಒಬ್ಬರಾಗಿರುವ ದೀಪಿಕಾ ಪಡುಕೋಣೆ ಆಸ್ಕರ್ ಅಂಗಳದಲ್ಲಿ ಸದ್ದು ಮಾಡ್ತಿದ್ದಾರೆ. ಒಂದ್ ಕಡೆ ನಿರೂಪಣೆಯ ವಿಚಾರವಾಗಿ ಗಮನ ಸೆಳೆದಿದ್ದರೆ, ಇನ್ನೊಂದ್ ಕಡೆ ತನ್ನ ಭಿನ್ನ ಡ್ರೆಸ್ ಸೆನ್ಸ್ನಿಂದ ನಟಿ ಹೈಲೈಟ್ ಆಗಿದ್ದಾರೆ.
ಕ್ಲಾಸಿ ಕಪ್ಪು ಬಣ್ಣದ ಗೌನ್ನಲ್ಲಿ ದೀಪಿಕಾ ಪಡ್ಡೆಹುಡುಗರ ನಿದ್ದೆ ಕದ್ದಿದ್ದಾರೆ. ಕಪ್ಪು ಬಣ್ಣದ ಗೌನ್ನಲ್ಲಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾರೆ. ಅದಷ್ಟೇ ಅಲ್ಲದೇ, ಪಿಂಕ್ ಬಣ್ಣದ ಮಾಡ್ರನ್ ಡ್ರೆಸ್ನಲ್ಲಿ ಕೂಡ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಆಸ್ಕರ್ ಅವಾರ್ಡ್ ಕಾರ್ಯಕ್ರಮ ಮುಗಿದ ಮೇಲೆ ಪಾರ್ಟಿ ಅರೆಂಜ್ ಮಾಡಲಾಗಿತ್ತು. ಈ ಪಾರ್ಟಿಯಲ್ಲಿ ಪಿಂಕ್ ಬಣ್ಣದ ಧಿರಿಸಿನಲ್ಲಿ ನಟಿ ಮಿಂಚಿದ್ದಾರೆ.