ಸಾಕಷ್ಟು ನೋವುಗಳ ಬಳಿಕ ಆಕಾಶದೀಪ ಧಾರವಾಹಿ ಖ್ಯಾತಿಯ ನಟಿ ದಿವ್ಯಾ ಶ್ರೀಧರ್ ಖುಷಿಯ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಪತಿಯಿಂದ ಸಾಕಷ್ಟು ನೋವು ಅನುಭವಿಸಿದ್ದ ನಟಿ ಇದೀಗ ಮುದ್ದು ಮಗುವನ್ನು ನೋಡುತ್ತಾ ತನ್ನೆಲ್ಲಾ ನೋವುಗಳನ್ನು ಮರೆಯುತ್ತಿದ್ದಾರೆ. ಮಗಳ ಜೊತೆಗೆ ಶೂಟಿಂಗ್ ಜವಬ್ದಾರಿಯನ್ನು ಹೊತ್ತಿರುವ ನಟಿ ಒಂದು ತಿಂಗಳ ಹಸುಗೂಸನ್ನು ಶೂಟಿಂಗ್ ಸೆಟ್ ಗೆ ಕರೆದುಕೊಂಡು ಹೋಗಿ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದಾರೆ.
ಮಗು ಹಾಗೂ ಶೂಟಿಂಗ್ ಎರಡನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ನಟಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಆಕಾಶದೀಪ, ಅಮ್ಮಾ, ಸೀರಿಯಲ್ ಸೇರಿದಂತೆ ಹಲವು ಧಾರವಾಹಿಗಳಲ್ಲಿ ನಟಿಸಿರುವ ನಟಿ ‘ಸನಿಹ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. ಬಳಿಕ ತಮಿಳು ಸೀರಿಯಲ್ನಲ್ಲಿ ಬ್ಯುಸಿಯಾದರು. ತಮಿಳು ನಟ ಅರ್ನವ್ ಜೊತೆಗಿನ ದಾಂಪತ್ಯದಲ್ಲಿ ಬಿರುಕಿನ ಬೆನ್ನಲ್ಲೇ ನಟಿ ಪೊಲೀಸ್ ಠಾಣೆ ಮಟ್ಟಿಲೇರಿ ಸುದ್ದಿಯಾದರು.
ಏಪ್ರಿಲ್ 7ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಅದಾಗಿ ಒಂದು ತಿಂಗಳು ಕಳೆಯುತ್ತಿದ್ದಂತೆ, ಮೇ 21ರಿಂದಲೇ ಅವರು ಮತ್ತೆ ಕೆಲಸ ಶುರು ಮಾಡಿದ್ದಾರೆ. ಹಸುಗೂಸನ್ನು ಕೂಡ ಅವರು ಶೂಟಿಂಗ್ ಸ್ಥಳಕ್ಕೆ ಕರೆದುಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ. ಕೆಲಸ ಮಾಡುವ ಮಹಿಳೆ ಮಾಡದಿರುವ ಕೆಲಸ ಇಲ್ಲ, ಮರಳಿ ಕೆಲಸಕ್ಕೆ ಎಂದು ದಿವ್ಯಾ ಶ್ರೀಧರ್ ಅವರು ಇಬ್ಬರು ಹೆಣ್ಣು ಮಕ್ಕಳ ಜೊತೆಗೆ ಶೂಟಿಂಗ್ ಸ್ಥಳಕ್ಕೆ ಹೋಗುವ ವಿಡಿಯೋವನ್ನು ಹಂಚಿಕೊಂಡಿದ್ದರು. ತಾಯಿಯ ಸಂಪತ್ತು ಮಗಳು ಎಂದು ಮುದ್ದು ಮಗಳ ಜೊತೆಗೆ ಆಟ ಆಡುತ್ತಿರುವ ವಿಡಿಯೋವನ್ನು ನಟಿ ದಿವ್ಯಾ ಹಂಚಿಕೊಂಡಿದ್ದರು.