ಇಷ್ಟು ದಿನಗಳ ಕಾಲ ನಾವು ಸ್ನೇಹಿತರು ಎನ್ನುತ್ತಲೆ ಜೊತೆ ಜೊತೆಯಾಗಿ ಓಡಾಡಿದ್ದ ಕೊಡಗಿನ ಬ್ಯೂಟಿ ನಟಿ ಹರ್ಷಿಕಾ ಪೂಣಚ್ಚ ಹಾಗೂ ನಟ ಭುವನ್ ಪೊನ್ನಣ್ಣ ಇದೀಗ ಹಸೆಮಣೆ ಏರಲು ಸಿದ್ದವಾಗಿದ್ದಾರೆ. ಗುರು ಹಿರಿಯರ ಒಪ್ಪಿಗೆ ಪಡೆದು ಇದೇ ಆಗಸ್ಟ್ 24ರಂದು ಇಬ್ಬರು ಕೊಡಗಿನಲ್ಲಿ ಸಪ್ತಪದಿ ತುಳಿಯುತ್ತಿದ್ದಾರೆ.
ಮೊನ್ನೆಯಷ್ಟೇ ಕೊಡಗಿನ ಇಗ್ಗುತ್ತಪ್ಪ ದೇವಾಲಯದಲ್ಲಿ ಲಗ್ನಪತ್ರಿಕೆ ಕಾರ್ಯ ಸರಳವಾಗಿ ನಡೆದಿದೆ. ಎರಡೂ ಕುಟುಂಬದ ಸದಸ್ಯರು ಮತ್ತು ಆತ್ಮೀಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮದುವೆಯಲ್ಲಿ ಎರಡು ಕುಟುಂಬದ ಸದಸ್ಯರು, ಈ ಜೋಡಿಯ ಆತ್ಮೀಯರು, ಸಿನಿಮಾ ರಂಗದ ಗಣ್ಯರು ಭಾಗಿಯಾಗಲಿದ್ದಾರೆ.
ಮದುವೆ ಆಮಂತ್ರಣ ಪತ್ರಿಕೆ ಕೂಡ ಸಿದ್ಧವಾಗಿದ್ದು, ಕೊಡಗು ಭಾಷೆಯಲ್ಲೇ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಲಾಗಿದೆ. ಕೊಡಗು ಸಂಪ್ರದಾಯದಂತೆಯೇ ಇಬ್ಬರೂ ಮದುವೆ ಆಗುತ್ತಿದ್ದು, ಮುಹೂರ್ತ ಕಾರ್ಯಗಳು ಬಹುತೇಕವಾಗಿ ಕೊಡಗಿನಲ್ಲೇ ನಡೆಯಲಿವೆ. ಭುವನ್ ಮತ್ತು ಹರ್ಷಿಕಾ ಇಬ್ಬರೂ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇಬ್ಬರೂ ಒಟ್ಟಿಗೆ ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ಭಾಗಿಯಾಗಿದ್ದರು.