ಮೃತ ವಿದ್ಯಾರ್ಥಿನಿ ನೇಹಾ ಹಿರೇಮಠ ಮನೆಗೆ ನಟಿ ಮಾಳವಿಕಾ ಅವಿನಾಶ್ ಭೇಟಿ ನೀಡಿದ್ದು ನೇಹಾ ಪೋಷಕರಿಗೆ ಸಾಂತ್ವನ ಹೇಳಿದ್ದಾರೆ. ಇದೇ ವೇಳೆ ಸರ್ಕಾರವ ವಿರುದ್ಧ ನಟಿ ವಾಗ್ದಾಳಿ ನಡೆಸಿದ್ದಾರೆ.
ನೇಹಾ ಪೋಷಕರನ್ನು ಭೇಟಿಯಾದಿ ಮಾಳವಿಕಾ ನೇಹಾ ಹತ್ಯೆಯ ಕುರಿತು ಬೇಸರ ಹೊರಹಾಕಿದ್ದಾರೆ. ನೇಹಾ ಪೋಷಕರ ಬಳಿ ಘಟನೆಯ ಬಗ್ಗೆ ವಿಚಾರಿಸಿ ಸಾಂತ್ವನ ಹೇಳಿದ್ದಾರೆ. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶವೇ ಬೆಚ್ಚಿಬೀಳುವಂತಹ ಘಟನೆ ನಮ್ಮ ಹುಬ್ಬಳ್ಳಿಯಲ್ಲಿ ನಡೆದಿದೆ. ಅತ್ಯಂತ ಕ್ರೂರ ರೀತಿಯಲ್ಲಿ ನೇಹಾ ಹಿರೇಮಠ ಕೊಲೆ ಆಗಿದೆ. ಅದು ಕೂಡ ಕಾಲೇಜು ಆವರಣದಲ್ಲಿಯೇ ನಡೆದಿದೆ ಎಂಬುದು ಆತಂಕವನ್ನು ಮೂಡಿಸಿದೆ. ಹೆಣ್ಣು ಮಕ್ಕಳಿಗೆ ಕಾಲೇಜು ಕ್ಯಾಂಪಸ್ನಲ್ಲೇ ರಕ್ಷಣೆ ಇಲ್ಲ ಎಂದರೆ ಅವರನ್ನು ಕಾಲೇಜಿಗೆ ಕಳಿಸಲು ಇನ್ಮುಂದೆ ಪೋಷಕರು ಹೇಗೆ ಧೈರ್ಯ ಮಾಡುತ್ತಾರೆ ಎಂದು ಮಾಳವಿಕಾ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಪ್ರಕರಣವನ್ನು ಸಿಬಿಐಗೆ ಕೊಡಬೇಕು ಎಂದು ಹೇಳುತ್ತೇನೆ. ಆಗ ಮಾತ್ರ ನ್ಯಾಯ ಸಿಗುತ್ತದೆ. ರಾಜ್ಯ ಸರ್ಕಾರದ ಧೋರಣೆ ಏನು ಎಂಬುದನ್ನು ನೋವು ಈಗಾಗಲೇ ನೋಡಿದ್ದೇವೆ. ಮೊದಲು ಏನೂ ನಡೆದೇ ಇಲ್ಲವೇನೋ ಎಂಬ ರೀತಿಯಲ್ಲಿ ಮಾತನಾಡಿದ್ದರು. ಆಮೇಲೆ ಅವರವರ ವೈಯಕ್ತಿಕ ಸಮಸ್ಯೆ ಎಂದು ವಿಚಾರವನ್ನು ತಳ್ಳಿಹಾಕುವ ಪ್ರಯತ್ನ ಮಾಡಿದರು. ಓಲೈಕೆಗಾಗಿ ಮಾಡುವುದು ಎಷ್ಟು ಸರಿ. ಅವರು ಮಾಡುವ ತನಿಖೆಯಲ್ಲಿ ನಮಗೆ ನಂಬಿಕೆ ಇಲ್ಲ ಎಂದು ಸರ್ಕಾರದ ವಿರುದ್ಧ ಹರಿ ಹಾಯ್ದಿದ್ದಾರೆ.