ಕಿಚ್ಚ ಸುದೀಪ್ ಸದ್ಯ ‘ಮ್ಯಾಕ್ಸ್’ (Max Film) ಸಿನಿಮಾದ ಕೆಲಸದಲ್ಲಿ ಬ್ಯುಸಿಯಿದ್ದಾರೆ. ಕಿಚ್ಚನ ಅಡ್ಡಾದಿಂದ ಹೊಸ ಸುದ್ದಿಯೊಂದು ಸಿಕ್ಕಿದೆ. 8 ವರ್ಷಗಳ ನಂತರ ಮ್ಯಾಕ್ಸ್ ಸುದೀಪ್ಗಾಗಿ ತಮಿಳು ನಟಿ ವರಲಕ್ಷ್ಮಿ ಶರತ್ಕುಮಾರ್ (Varalakshmi Sarath Kumar) ಸಾಥ್ ನೀಡಿದ್ದಾರೆ. ಮಾಣಿಕ್ಯನಿಗೆ ನಟಿ ಜೊತೆಯಾಗಿದ್ದಾರೆ.
ವಿಜಯ್ ಕಾರ್ತಿಕೇಯನ್ (Vijay Karthikeyan) ನಿರ್ದೇಶನದ ಮ್ಯಾಕ್ಸ್ ಸಿನಿಮಾ ಶೂಟಿಂಗ್ ಭರದಿಂದ ಸಾಗುತ್ತಿದೆ. ಈ ಹಿಂದೆ ಮಾಣಿಕ್ಯ (Maanikya) ಸಿನಿಮಾದಲ್ಲಿ ಕಿಚ್ಚನಿಗೆ ನಾಯಕಿಯಾಗಿ ಮೋಡಿ ಮಾಡಿದ್ದ ಚೆಲುವೆ ವರಲಕ್ಷ್ಮಿ ಶರತ್ಕುಮಾರ್ ಈಗ ‘ಮ್ಯಾಕ್ಸ್’ ಸಿನಿಮಾದಲ್ಲೂ ನಟಿಸಿದ್ದಾರೆ ಎನ್ನಲಾಗುತ್ತಿದೆ
ಸದ್ಯಕ್ಕಂತೂ ಈ ಬಗ್ಗೆ ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಬಿಟ್ಟುಕೊಟ್ಟಿಲ್ಲ. ಅಲ್ಲದೇ, ವರಲಕ್ಷ್ಮಿ ಸೇರ್ಪಡೆ ಬಗ್ಗೆಯೂ ಅಧಿಕೃತ ಘೋಷಣೆ ಮಾಡಿಲ್ಲ. ಮೂಲಗಳ ಪ್ರಕಾರ, ವರಲಕ್ಷ್ಮಿ ಶರತ್ಕುಮಾರ್ ಅವರಿಗೆ ಈ ಸಿನಿಮಾದಲ್ಲಿ ಪ್ರಧಾನ ಪಾತ್ರವಿದ್ದು, ಈಗಾಗಲೇ ಅವರು ಮಹತ್ವದ ದೃಶ್ಯಗಳ ಚಿತ್ರೀಕರಣವನ್ನೂ ಕೂಡ ಮುಗಿಸಿದ್ದಾರಂತೆ. ಇನ್ನು, ಈ ಸಿನಿಮಾದಲ್ಲಿ ಸುದೀಪ್ ಜೊತೆಗೆ ಸಂಯುಕ್ತಾ ಹೊರನಾಡು, ಅನಿರುದ್ಧ್ ಭಟ್, ಸುಕೃತಾ ವಾಘ್ಳೆ ಮುಂತಾದವರು ನಟಿಸುತ್ತಿದ್ದಾರೆ.