90ರ ದಶಕದಲ್ಲಿ ಬಹುಭಾಷಾ ನಟಿಯಾಗಿ ಸಾಕಷ್ಟು ಬೇಡಿಕೆ ಇರಿಸಿಕೊಂಡಿದ್ದ ನಟಿ ಮೀನಾ ಇಂದಿಗೂ ಅದೇ ಚಾರ್ಮ್ ಉಳಿಸಿಕೊಂಡಿದ್ದಾರೆ. ಆದರೆ ಕಳೆದೊಂದು ವರ್ಷದಿಂದ ನಟಿ ಎರಡನೇ ಮದುವೆಯ ಕುರಿತು ಸುದ್ದಿಯಾಗ್ತಿದ್ದಾರೆ. ಪತಿಯ ನಿಧನದ ಬಳಿಕ ಮೀನಾ ಎರಡನೇ ಮದುವೆಗೆ ಸಿದ್ದವಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದರ ಜೊತೆಗೆ ಈಕೆಯ ಹೆಸರು ನಟ ಧನುಷ್ ಜೊತೆಯೂ ಕೇಳಿ ಬಂದಿತ್ತು. ಈ ಮಧ್ಯೆ ಮೀನಾ 15ನೇ ವಯಸ್ಸಿಗೆ ಗರ್ಭಿಣಿಯಾಗಿದ್ದರು ಎನ್ನುವ ವಿಷಯ ಸಖತ್ ಸದ್ದು ಮಾಡುತ್ತಿದೆ.
ಹೌದು. ನಟಿ ಮೀನಾ ಅವರ 40ನೇ ಹುಟ್ಟುಹಬ್ಬದಂದು ಆಯೋಜಿಸಲಾಗಿದ್ದ ಮೀನಾ@40 ವಿಶೇಷ ಅಭಿನಂದನಾ ಕಾರ್ಯಕ್ರಮದಲ್ಲಿ ಈ ವಿಷಯ ಬೆಳಕಿಗೆ ಬಂದಿದೆ. ಹಿರಿಯ ನಟ ರವಿ ಕಿರಣ್, ಮೀನಾ ಅವರ ಕುರಿತು ಈ ಸಂದರ್ಭದಲ್ಲಿ ಹೇಳಿದ್ದಾರೆ. ಅಷ್ಟಕ್ಕೂ ಅವರು ಹೇಳಿದ್ದು 15ನೇ ವಯಸ್ಸಿನಲ್ಲಿ ಮೀನಾ ಗರ್ಭಿಣಿಯ ಪಾತ್ರ ಮಾಡಿದ್ದರು ಎನ್ನುವುದು.
1991ರಲ್ಲಿ ಕಾಲಿವುಡ್ನಲ್ಲಿ ಕಸ್ತೂರಿ ರಾಜ ನಿರ್ದೇಶನದಲ್ಲಿ ಎನ್ ರಾಸವಿನ್ ಮನಸಿಲೇ ಸಿನಿಮಾಕ್ಕೆ ನಾಯಕಿಯ ಹುಡುಕಾಟ ನಡೆದಿತ್ತು. ಈ ವೇಳೆ ನಿರ್ದೇಶಕರ ಕಣ್ಣಿಗೆ ಬಿದ್ದಿದ್ದು ನಟಿ ಮೀನಾ. ಆದರೆ ಆಕೆಗೆ ಇನ್ನೂ 15 ವರ್ಷ ವಯಸ್ಸಾಗಿತ್ತು. ಆದರೆ ಸಿನಿಮಾದಲ್ಲಿ ಮೀನಾ ಗರ್ಭಿಣಿಯ ಪಾತ್ರ ಮಾಡಬೇಕಿತ್ತು. ಆದರೂ ಮೀನಾ ಮೇಲೆ ಭರವಸೆ ಇಟ್ಟು ಪಾತ್ರ ಮಾಡಿಸಿದ್ದರು. ಅದ್ಭುತ ಅಭಿನಯದ ಮೂಲಕ ಮೀನಾ ಎಲ್ಲರ ಗಮನ ಸೆಳೆದು ಸೂಪರ್ ಹಿಟ್ ಪಟ್ಟಕ್ಕೇರಿದರು. ಇದನ್ನೇ ರವಿಕಿರಣ್ ವೇದಿಕೆ ಮೇಲೆ ಹೇಳಿದರು.
ಬಾಲ ನಟಿಯಾಗಿ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟ ಮೀನಾ, ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿಯೂ ನಟಿಸಿದ್ದಾರೆ. ಮದುವೆಯ ನಂತರ ಸಿನಿಮಾಗಳಲ್ಲಿ ನಟಿಸುವುದನ್ನು ಕಡಿಮೆ ಮಾಡಿದ್ದರು. ಮಗಳು ಜನಿಸಿದ ಬಳಿಕ ಸ್ವಲ್ಪ ಗ್ಯಾಪ್ ಕೊಟ್ಟು ಮತ್ತೆ ಸಿನಿಮಾಗಳಲ್ಲಿ ನಟಿಸುವುದಕ್ಕೆ ಆರಂಭಿಸಿದ್ದಾರೆ. ಇದೀಗ ಮಗಳೇ ನನಗೆ ಸರ್ವಸ್ವ ಎಂದಿರುವ ಮೀನಾ, ಈ ರೀತಿಯ ಸುಳ್ಳು ಸುದ್ದಿಯನ್ನು ಹರಡುವ ಮುನ್ನ ನನ್ನ ಮತ್ತು ಮಗಳ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎನ್ನುವುದನ್ನು ನೋಡಬೇಕು ಎಂದು ನೋವು ತೋಡಿಕೊಂಡಿದ್ದಾರೆ.