ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಜೋಡಿ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ನಟಿ ಮಿಲನಾ ನಾಗರಾಜ್ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸಂತಸದ ಸುದ್ದಿಯನ್ನು ಡಾರ್ಲಿಂಗ್ ಕೃಷ್ಣ ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ನ್ನು ಹಂಚಿಕೊಂಡಿದ್ದಾರೆ.
ಮೊದಲ ಮಗುವನ್ನು ಪಡೆದುಕೊಂಡು ಡಾರ್ಲಿಂಗ್ ಕೃಷ್ಣ ಕುಟುಂಬ ಸಂಭ್ರಮದಲ್ಲಿದೆ. ನಾರ್ಮಲ್ ಡೆಲಿವರಿ ಮೂಲಕ ಮಿಲನಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗಳು ಬಂದಿರುವುದು ಬಹಳ ಖುಷಿ ನೀಡಿದೆ. ತಾಯಿ ಮತ್ತು ಮಗಳು ಆರೋಗ್ಯವಾಗಿದ್ದಾರೆ ಎಂದು ಡಾರ್ಲಿಂಗ್ ಕೃಷ್ಣ ಬರೆದುಕೊಂಡಿದ್ದಾರೆ.
ಈ ಜರ್ನಿಯಲ್ಲಿ ಮಿಲನಾ ನಾಗರಾಜ್ ಅನುಭವಿಸಿದ ನೋವು, ಮಾಡಿದ ತ್ಯಾಗ, ತೋರಿದ ಧೈರ್ಯದ ಬಗ್ಗೆ ನನಗೆ ಹೆಮ್ಮೆ ಇದೆ. ಈ ಜರ್ನಿಯಲ್ಲಿ ಸಾಗುವ ಎಲ್ಲ ತಾಯಂದಿರಿಗೆ ನನ್ನ ಸೆಲ್ಯೂಟ್. ಇದನ್ನು ನೋಡಿ ನನಗೆ ಮಹಿಳೆಯರ ಮೇಲೆ ಇದ್ದ ಗೌರವ ದುಪ್ಪಟ್ಟಾಗಿದೆ. ಇಂದು ಮಗಳು ಜನಿಸಿರೋದು ನನಗೆ ಹೆಮ್ಮೆಯಿದೆ. ನಾನೊಬ್ಬ ಅದೃಷ್ಟವಂತ ತಂದೆ” ಎಂದು ಡಾರ್ಲಿಂಗ್ ಕೃಷ್ಣ ಪೋಸ್ಟ್ ಹಂಚಿಕೊಂಡಿದ್ದಾರೆ.