ಸೀತಾ ರಾಮಂ ಸಿನಿಮಾದ ಮೂಲಕ ಖ್ಯಾತಿ ಘಳಿಸಿರುವ ನಟಿ ಮೃಣಾಕ್ ಠಾಕೂರ್ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಸಂದರ್ಶನವೊಂದರಲ್ಲಿ ಎಗ್ ಫ್ರೀಜ್ ಮಾಡಿ ಮಗು ಮಾಡಿಕೊಳ್ಳುವ ಪ್ಲ್ಯಾನ್ನಲ್ಲಿ ಇರೋದಾಗಿ ನಟಿ ಹೇಳಿದ್ದಾರೆ. ನಟಿಯ ಹೇಳಿಕೆ ಸದ್ಯ ವೈರಲ್ ಆಗಿದೆ.
ವೃತ್ತಿ ಜೀವನದಲ್ಲಿ ಬ್ಯುಸಿ ಇರುವುದರಿಂದ ಅನೇಕ ಸೆಲೆಬ್ರಿಟಿಗಳು ಮಗುವನ್ನು ಪಡೆಯಲು ತಡ ಮಾಡುತ್ತಾರೆ. ಆ ಸಂದರ್ಭದಲ್ಲಿ ಎಗ್ ಫ್ರೀಜಿಂಗ್ ತಂತ್ರಜ್ಞಾನದ ಮೊರೆ ಹೋಗುತ್ತಾರೆ. ‘ಸೀತಾರಾಮಂ’ ನಟಿ ಮೃಣಾಲ್ ಕೂಡ ಇದೇ ರೀತಿಯ ಪ್ಲ್ಯಾನ್ ಮಾಡಿದ್ದು ಈ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಸಂಬಂಧಗಳು ಕಷ್ಟ. ನನ್ನ ಕೆಲಸದ ಸ್ವರೂಪ ಅವರಿಗೆ ಅರ್ಥ ಆಗಬೇಕು. ನಾನು ಕೂಡ ನನ್ನ ಎಗ್ಗಳನ್ನು ಫ್ರೀಜ್ ಮಾಡುವ ವಿಚಾರದ ಬಗ್ಗೆ ಆಲೋಚಿಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ. ಒಂದೊಮ್ಮೆ ಶೀಘ್ರವೇ ಮದುವೆ ಆದರೂ ಸದ್ಯಕ್ಕಂತೂ ಮಗು ಪಡೆಯೋ ಆಲೋಚನೆ ತಮಗಿಲ್ಲ ಎಂಬುದನ್ನು ಅವರು ಪರೋಕ್ಷವಾಗಿ ಹೇಳಿದ್ದಾರೆ.
ಈ ವೇಳೆ, ಟ್ರೋಲ್ಗಳ ಬಗ್ಗೆ, ಕುಟುಂಬ ನೀಡಿದ ಬೆಂಬಲದ ಬಗ್ಗೆಯೂ ಮೃಣಾಲ್ ಮಾತನಾಡಿದ್ದಾರೆ. ನಮ್ಮ ಕುಟುಂಬದವರನ್ನು ಬಿಟ್ಟು ಬೇರಾರೂ ಆ ಬಗ್ಗೆ ಕೇರ್ ಮಾಡುವುದಿಲ್ಲ ಎಂದು ಹೇಳಿದ್ದಾರೆ.