ರವಿಚಂದ್ರನ್ ನಟನೆಯ ದೃಶ್ಯ ಸಿನಿಮಾದಲ್ಲಿ ನಟಿಸಿದ್ದ ಮಲಯಾಳಂ ನಟಿ ನವ್ಯಾ ನಾಯರ್ ಹಲವು ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ನಟನೆ ಹಾಗೂ ಮುಗ್ದ ಮುಖದಿಂದಲೇ ಲಕ್ಷಾಂತರ ಅಭಿಮಾನಿಗಳನ್ನು ಘಳೀಸಿರೋ ನಟಿ ಇದೀಗ ಒಳ್ಳೆಯ ಕೆಲಸ ಮಾಡುವ ಮೂಲಕ ಅಭಿಮಾನಿಗಳ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ನಟಿ ಆಗಾಗ ತಮ್ಮ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ತಾವು ಬಳಸಿದ ಸೀರೆಗಳನ್ನು ಮಾರಾಟ ಮಾಡಲು ನಟಿ ಮುಂದಾಗಿದ್ದಾರೆ.
ತಾವು ಬಳಸಿದ ಸೀರೆಗಳನ್ನು ಮಾರಾಟ ಮಾಡುತ್ತಿರುವ ನಟಿ ಅದಕ್ಕಾಗಿ ಇನ್ಸ್ಟಾಗ್ರಾಂ ಖಾತೆಯನ್ನು ತೆರೆದಿದ್ದಾರೆ.
ನಟಿ ಸೀರೆ ಮಾರಾಟಕ್ಕಿಳಿದ ಬಗ್ಗೆ ಭಾರೀ ಟೀಕೆಗಳು ಕೇಳಿ ಬಂದಿತ್ತು. ಎಷ್ಟೇ ದುಡ್ಡು ಮಾಡಿದ್ರೂ ಮತ್ತೆ ದುಡ್ಡು ಮಾಡ್ಬೇಕು ಅನ್ನೋ ಆಸೆ ಹೆಚ್ಚು ಎಂದು ನೆಟ್ಟಿಗರು ಕಮೆಂಟ್ ಮಾಡಿದ್ರು. ಆದರೆ ಬಾಲಿವುಡ್ ಸೇರಿದಂತೆ ಇತರ ಕ್ಷೇತ್ರಗಳಲ್ಲಿ ನಟಿಯರು ಈ ರೀತಿ ಸೀರೆ ಮಾಡ್ತಾರೆ ಎಂದು ಅಭಿಮಾನಿಗಳು ನವ್ಯಾಗೆ ಬೆಂಬಲ ನೀಡಿದ್ರು.
ಕಾಂಜೀವರಂ ಸೀರೆಗಳು 4000-4600 ರೂ ಇದೆ. ನವ್ಯಾ ನಾಯರ್ ಸೀರೆಗಳ ಬೆಲೆ ದುಬಾರಿ ಆಯ್ತು ಎಂದು ಕೆಲವರು ಆರೋಪ ಮಾಡಿದ್ರು. ಸೀರೆ ಮಾರಾಟ ಮಾಡಿ ಬಂದ ಹಣವನ್ನು ನವ್ಯಾ ದುಂದುವೆಚ್ಚ ಮಾಡಲು ಎಲ್ಲೂ ತೆಗೆದುಕೊಂಡು ಹೋಗಿರಲಿಲ್ಲ. ಬದಲಿಗೆ ಒಳ್ಳೆ ಕೆಲಸಕ್ಕೆ ನವ್ಯಾ ಹಣವನ್ನು ಬಳಸಿದ್ದಾರೆ.
ನವ್ಯಾ ತನ್ನ ಸೀರೆ ಮಾರಾಟ ಮಾಡಿದ ಬಂದ ಹಣ ಮತ್ತು ಕೈಯಲ್ಲಿದ್ದ ಒಂದಷ್ಟು ಹಣವನ್ನು ಒಟ್ಟು ಗೂಡಿಸಿ ಅದರಲ್ಲಿ ಹಲವು ವಸ್ತುಗಳನ್ನು ಖರೀದಿಸಿದ ಪಠಾಣಾಪುರದ ಗಾಂಧಿ ಭವನಕ್ಕೆ ತೆರಳಿದ್ರು.
ಗಾಂಧಿ ಭವನದ ಕೈದಿಗಳನ್ನು ಭೇಟಿಯಾಗಲು ಕುಟುಂಬ ಸಮೇತ ತೆರಳಿದ ನವ್ಯಾ ಕೈದಿಗಳಿಗೆ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಹೋಗಿ ಕೊಟ್ಟಿದ್ದಾರೆ.
ನವ್ಯಾ ಅವರು ಕೈದಿಗಳಿಗೆ ಹೊಸ ಬಟ್ಟೆ ಹಾಗೂ ಸಿಹಿತಿಂಡಿ ಹಾಗೂ ಗಾಂಧಿ ಭವನ ವಿಶೇಷ ಶಾಲೆಗೆ 1 ಲಕ್ಷ ರೂ. ಹಣ ನೀಡುವ ಮೂಲಕ ತಾನು ಸೀರೆ ಮಾರಾಟ ಮಾಡಿದ ಹಣವನ್ನು ಸದ್ಬಳಕೆ ಮಾಡಿ ಅನೇಕರಿಗೆ ಮಾದರಿಯಾಗಿದ್ದಾರೆ.
ನಟಿ ನವ್ಯಾ ನಾಯರ್ ಇತ್ತೀಚಿಗೆ ವಿವಾದಕ್ಕೂ ಸಿಲುಕಿದ್ರು. ಅಕ್ರಮ ಆಸ್ತಿ ಗಳಿಕೆ ಹಿನ್ನೆಲೆ ಜೈಲು ಸೇರಿದ್ದ ಅಧಿಕಾರಿಯೊಬ್ಬರ ಟಚ್ನಲ್ಲಿ ನವ್ಯಾ ಇದ್ದರು ಎನ್ನಲಾಗಿತ್ತು. ವಿಚಾರಣೆ ಬಳಿಕ ಮಾತಾಡಿದ್ದ ನವ್ಯಾ ನನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವ ಮೂಲಕ ಆರೋಪವನ್ನು ಅಲ್ಲಗೆಳೆದಿದ್ರು.