ಬಾಲಿವುಡ್ ನಟಿ ನೇಹಾ ಧೂಪಿಯಾ ಮದುವೆಯಾಗಿ 8 ವರ್ಷಗಳ ಬಳಿಕ ತೆರೆ ಹಿಂದಿನ ತಮ್ಮ ಮದುವೆಯ ವಿಷಯವನ್ನು ಮಾತನಾಡಿದ್ದಾರೆ. ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದರ ಬಗ್ಗೆ ನಟಿ ಸಂದರ್ಶನವೊಂದರಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ನೇಹಾ ಧೂಪಿಯಾ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸ್ಟಾರ್ ನಟರಿಗೆ ನಾಯಕಿಯಾಗಿ ಮಿಂಚಿದ್ದ ನಟಿ, ಸಿನಿಮಾ ಕೆರಿಯರ್ನಲ್ಲಿ ಬೇಡಿಕೆ ಇರೋವಾಗಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅಷ್ಟೊಂದು ಗಡಿ ಬಿಡಿಯಲ್ಲಿ ಮದುವೆಯಾಗಿದ್ಯಾಕೆ.? ಎಂದು ನಟಿ ಇದೀಗ ಪ್ರತಿಕ್ರಿಯಿಸಿದ್ದಾರೆ.
ಬೇಡಿಕೆ ಇರುವಾಗಲೇ ನೇಹಾ ಧೂಪಿಯಾ, ಅಂಗದ್ ಬೇಡಿ ಅವರನ್ನು ಮೇ 10, 2018ರಲ್ಲಿ ಮದುವೆಯಾದರು. ನೇಹಾ ಸಿಖ್ ಸಂಪ್ರದಾಯದಂತೆ ಎರಡು ಕುಟುಂಬಗಳ ಸಮ್ಮುಖದಲ್ಲಿ ಮದುವೆಯಾದರು. ಮದುವೆಗೂ ಮುನ್ನವೇ ತಾನು ಪ್ರೆಗ್ನೆಂಟ್ ಆಗಿದ್ದೆ, ಹಾಗಾಗಿ ಆತುರದಲ್ಲಿ ಮದುವೆಯಾಗುವ ಸಂದರ್ಭ ಎದುರಾಯಿತು ಎಂದಿದ್ದಾರೆ.
ನಾನು ಪ್ರೆಗ್ನೆಂಟ್ ಆಗಿರುವ ವಿಷಯ ತಿಳಿದ ಪೋಷಕರು 2 ದಿನದಲ್ಲಿ ಮದುವೆಯಾಗಬೇಕು ಎಂದು ತಾಕೀತು ಮಾಡಿದರು. ಬಳಿಕ 72 ಗಂಟೆಯಲ್ಲಿ ನನ್ನ – ಅಂಗದ್ ಮದುವೆ ಆಪ್ತರ ಸಮ್ಮುಖದಲ್ಲಿ ನೆರವೇರಿತ್ತು. ಮದುವೆಯಾದ ಕೆಲವೇ ದಿನಗಳಲ್ಲಿ ತಾನು ಪ್ರೆಗ್ನೆಂಟ್ ಆಗಿರುವ ಬಗ್ಗೆ ಅನೌನ್ಸ್ ಮಾಡಿದ್ದೆ, ಬಳಿಕ ಸಾಕಷ್ಟು ಟ್ರೋಲ್- ಟೀಕೆಗೆ ಒಳಗಾಗಿದ್ದೆ ಎಂದು ನೇಹಾ ಹೇಳಿದ್ದಾರೆ.