ರ್ಯಾಪರ್ ಚಂದನ್ ಶೆಟ್ಟಿ ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿದ ಮೇಲೆ ನಿವೇದಿತಾ ಸೋಷಿಯಲ್ ಮೀಡಿಯಾದಲ್ಲಿ ಅಂತರ ಕಾಯ್ದುಕೊಂಡಿದ್ದರು. ಕೆಲ ದಿನಗಳ ಕಾಲ ಸಾಮಾಜಿಕ ಜಾಲಾ ತಾಣದಿಂದ ದೂರವಿದ್ದ ನಟಿ ಇದೀಗ ಹೊಸ ರೀಲ್ಸ್ ಹಂಚಿಕೊಂಡಿದ್ದಾರೆ.
ನಗುತ್ತಿರುವ ವಿಡಿಯೋವನ್ನು ನಟಿ ಶೇರ್ ಮಾಡಿದ್ದಾರೆ. 30 ಸಾವಿರಕ್ಕೂ ಅಧಿಕ ಲೈಕ್ಸ್ ಪಡೆದುಕೊಂಡಿದೆ. ಬಗೆ ಬಗೆಯ ಕಾಮೆಂಟ್ಗಳು ಹರಿದು ಬರುತ್ತಿದೆ.
ಬಿಗ್ ಬಾಸ್ ಮನೆಯಲ್ಲಿದ್ದ ವೇಳೆ ಪ್ರೀತಿ ಮದುವೆಯಾಗಿದ್ದ ಚಂದನ್ ಹಾಗೂ ನಿವೇದಿತಾ ಮದುವೆಯಾದ ನಾಲ್ಕೇ ವರ್ಷಕ್ಕೆ ಡಿವೋರ್ಸ್ ಪಡೆದುಕೊಂಡಿದ್ದಾರೆ. ಜೂನ್ 7ರಂದು ಕಾನೂನು ಬದ್ಧವಾಗಿ ಪರಸ್ಪರ ಒಪ್ಪಂದದಿಂದ ಸಂಬಂಧ ಕೊನೆಗೊಳಿಸುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ಚಂದನ್ ಮತ್ತು ನಿವೇದಿತಾ ಅನೌನ್ಸ್ ಮಾಡಿದ್ದರು.
ನಾನು ಮತ್ತು ನಿವೇದಿತಾ ಮದುವೆಯಾಗಿ ನಾಲ್ಕು ವರ್ಷಗಳ ನಂತರ ಕಾನೂನುಬದ್ಧವಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ. ನಮ್ಮ ಸ್ವಂತ ಸಂತೋಷ ಮತ್ತು ಬೆಳವಣಿಗೆಯ ಮೇಲೆ ಕೇಂದ್ರೀಕರಿಸುವುದು ಮುಖ್ಯ ಎಂದು ಅರ್ಥಮಾಡಿಕೊಳ್ಳುವ ಮೂಲಕ ನಾವು ನಮ್ಮ ಮದುವೆಯನ್ನು ಉತ್ತಮ ರೀತಿಯಲ್ಲಿ ಕೊನೆಗೊಳಿಸುತ್ತಿದ್ದೇವೆ. ಈ ಕಷ್ಟದ ಸಮಯದಲ್ಲಿ ನಾವು ಮಾಧ್ಯಮಗಳು, ನಮ್ಮ ಸ್ನೇಹಿತರು ಮತ್ತು ಅಭಿಮಾನಿಗಳಿಂದ ಬೆಂಬಲವನ್ನು ಕೇಳುತ್ತೇವೆ. ನಾವು ನಮ್ಮ ದಾರಿಯಲ್ಲಿ ಹೋಗುತ್ತಿದ್ದರೂ ಸಹ, ನಾವು ಇನ್ನೂ ಪರಸ್ಪರ ಬಲವಾದ ಸ್ನೇಹ ಮತ್ತು ಗೌರವವನ್ನು ಹೊಂದಿದ್ದೇವೆ. ಈ ಸವಾಲಿನ ಅವಧಿಯಲ್ಲಿ ನಿಮ್ಮ ಬೆಂಬಲ ನಮ್ಮಿಬ್ಬರ ಮೇಲಿರಲಿ ಎಂದು ಪೋಸ್ಟ್ ಮಾಡಿದ್ದರು.
ಚಂದನ್ ಹಾಗೂ ನಿವೇದಿತಾ ಗೌಡ ಕ್ಯಾಂಡಿಕ್ರಶ್ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇಬ್ಬರ ಡಿವೋರ್ಸ್ ಬೆನ್ನಲ್ಲೇ ಸಿನಿಮಾದ ಗತಿ ಏನು ಎಂದು ಸಾಕಷ್ಟು ಮಂದಿ ಪ್ರಶ್ನಿಸಿದ್ದರು. ಡಿವೋರ್ಸ್ ಆಗಿದ್ದರು ಸಿನಿಮಾದಲ್ಲಿ ಒಟ್ಟಿಗೆ ನಟಿಸುವ ಬಗ್ಗೆ ಜೋಡಿಗಳು ಮಾತನಾಡಿದ್ದಾರೆ. ಸದ್ಯ ಇನ್ನೂ ಕೆಲದಿನಗಳ ಚಿತ್ರೀಕರಣವಷ್ಟೇ ಭಾಕಿ ಇದ್ದು ವರ್ಷದ ಕೊನೆಯಲ್ಲಿ ಚಿತ್ರ ತೆರೆಗೆ ಬರಲಿದೆ.