ಇತ್ತೀಚೆಗೆ ನಟ ಕಂ ರಾಜಕಾರಣ ಉದಯ್ ನಿಧಿ ಸ್ಟಾಲಿನ್ ಹಾಗೂ ನಟಿ ನಿವೇತಾ ಕುರಿತು ಸುದ್ದಿಯೊಂದು ಹರಿದಾಡಿತ್ತು. ಈ ಬಗ್ಗೆ ಗರಂ ಆಗಿದ್ದ ನಟಿ ತಮ್ಮನ್ನು ಉದಯನಿಧಿ ಸ್ಟಾಲಿನ್ ಜೊತೆ ಕೆಟ್ಟದ್ದಾಗಿ ಬಿಂಬಿಸುತ್ತಿರುವುದಕ್ಕೆ ತರಾಟೆಗೆ ತಗೆದುಕೊಂಡಿದ್ದರು. ಇದೀಗ ಸಮಾಧಾನದಿಂದ ಗಾಸಿಪ್ ಕುರಿತಾಗಿ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಕಷ್ಟದ ದಿನಗಳನ್ನೂ ನಟಿ ಶೇರ್ ಮಾಡಿದ್ದಾರೆ.
ತಮ್ಮ ಸಿನಿಮಾದಲ್ಲಿ ನಟಿಸಿದ್ದ ನಟಿಯೊಬ್ಬರಿಗೆ ರಾಜಕಾರಣಿಯೊಬ್ಬರು ಕೋಟ್ಯಂತರ ಮೌಲ್ಯದ ಫ್ಲ್ಯಾಟ್ ಕೊಡಿಸಿ, ದುಬೈನಲ್ಲಿ ಇಟ್ಟಿದ್ದಾರೆ ಎನ್ನುವ ವಿಚಾರ ತಮಿಳು ಚಿತ್ರರಂಗದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ನಟಿ ನಿವೇತಾ ಪೇತುರಾಜ್, ಆ ರಾಜಕಾರಣಿಯಿಂದ (Politician) ಸಾಕಷ್ಟು ದುಬಾರಿ ಗಿಫ್ಟ್ ಗಳನ್ನು ಪಡೆದುಕೊಂಡಿದ್ದಾರೆ ಎಂದೂ ಹೇಳಲಾಗಿತ್ತು. ಆ ರಾಜಕಾರಣಿ ಬೇರೆ ಯಾರೂ ಅಲ್ಲ, ಉದಯನಿಧಿ ಸ್ಟಾಲಿನ್ ಎಂದೂ ಸುದ್ದಿ ಹರಿದಾಡಿತ್ತು.
ಗಾಳಿ ಸುದ್ದಿಗೆ ಸ್ಪಷ್ಟನೆ ನೀಡಿದ ನಟಿ ನಿವೇತಾ, ನಾನು 16ನೇ ವಯಸ್ಸಿನಲ್ಲೇ ದುಡಿಯಲು ಪ್ರಾರಂಭಿಸಿದೆ. ನಾನು ಅತ್ಯಂತ ಸುಂಸ್ಕೃತ ಮನೆತನದಿಂದ ಬಂದವಳು. ದುಡ್ಡು ಮಾಡಲು ಅಡ್ಡ ದಾರಿ ಹಿಡಿಯುವವಳು ಅಲ್ಲ. ಈ ಸುದ್ದಿಯನ್ನು ಹಬ್ಬಿಸುವಾಗ ಎಚ್ಚರವಿರಲಿ ಎಂದು ನಿವೇತಾ ಎಚ್ಚರಿಕೆ ನೀಡಿದ್ದರು.
ತಮ್ಮ ಕುಟುಂಬ ಹತ್ತಾರು ವರ್ಷಗಳಿಂದ ದುಬೈನಲ್ಲಿ ನೆಲೆಸಿದೆ. ನಾನೂ ಕೂಡ ಸಂಪಾದನೆ ಮಾಡಿಕೊಂಡು ಬಂದಿದ್ದೇನೆ. ಅದಕ್ಕಾಗಿ ಈವರೆಗೂ ಯಾವುದೇ ಅಡ್ಡದಾರಿ ತುಳಿದಿಲ್ಲ. ಅದರ ಅವಶ್ಯಕತೆಯೂ ತಮಗಿಲ್ಲ. ನಾನು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಹಾಗಾಗಿ ಇಂತಹ ವಿಷಯಗಳು ಬಂದಾಗ ನೋವಾಗತ್ತೆ ಎನ್ನುವುದು ನಿವೇತಾ ಮಾತು. ತಮಗೆ ಯಾವುದೇ ರಾಜಕಾರಣಿಯ ಜೊತೆ ನಂಟಿಲ್ಲ. ಅವರೊಂದಿಗೆ ಕೆಲಸ ಮಾಡಿದ್ದೇನೆ. ಅದು ಆಯಾ ಸಿನಿಮಾಗೆ ಮಾತ್ರ ಸಿಮೀತ. ಅದರಾಚೆ ಯಾವ ಸ್ನೇಹವೂ ಇಲ್ಲ ಎಂದು ಹರಿದಾಡಿದ ಸುದ್ದಿಗೆ ಸ್ಪಷ್ಟನೆ ನೀಡಿದ್ದಾರೆ.