ಬಹುಭಾಷಾ ನಟಿ, ಕನ್ನಡತಿ ಪ್ರಿಯಾಮಣಿ ಮತ್ತೆ ಸಿನಿಮಾ ರಂಗದಲ್ಲಿ ಆಕ್ಟೀವ್ ಆಗಿದ್ದಾರೆ. ಸದ್ಯ ಪ್ರಿಯಾಮಣಿ ಶಾರುಖ್ ಖಾನ್ ಜೊತೆ ನಟಿಸುವ ಬಗ್ಗೆ ಸಿಹಿಸುದ್ದಿ ನೀಡಿದ್ದಾರೆ. ಈ ಹಿಂದೆ ʻಚೆನ್ನೈ ಎಕ್ಸಪ್ರೆಸ್’ ಸಿನಿಮಾದಲ್ಲಿ ಶಾರುಖ್ ಖಾನ್ ಜೊತೆ ಸೊಂಟ ಬಳುಕಿಸಿದ್ದ ನಟಿ ಇದೀಗ ಮತ್ತೆ ಕಿಂಗ್ ಖಾನ್ ಜೊತೆ ನಟಿಸುವ ಬಿಗ್ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ. ಈ ಬಗ್ಗೆ ಪ್ರಿಯಾಮಣಿ ಪ್ರತಿಕ್ರಿಯೆ ನೀಡಿದ್ದಾರೆ.
ಅಟ್ಲಿ ನಿರ್ದೇಶನದ ‘ಜವಾನ್’ ಚಿತ್ರದಲ್ಲಿ ಮಲ್ಟಿ ಸ್ಟಾರ್ಸ್ ನಟಿಸುತ್ತಿದ್ದಾರೆ. ಆ ಸಾಲಿಗೆ ಈಗ ಪ್ರಿಯಾಮಣಿ ಕೂಡ ಸೇರ್ಪಡೆಯಾಗಿದ್ದಾರೆ. ಈ ಹಿಂದೆ ಚೆನ್ನೈ ಎಕ್ಸ್ಪ್ರೆಸ್ ಸಿನಿಮಾದಲ್ಲಿ 1,2,3,4 ಎಂಬ ಹಾಡಿಗೆ ಶಾರುಖ್ ಜೊತೆ ಮಸ್ತ್ ಆಗಿ ಡ್ಯಾನ್ಸ್ ಮಾಡಿದ್ದ ಪ್ರಿಯಾಮಣಿ ಇದೀಗ ಮತ್ತೆ ಶಾರುಖ್ ಜೊತೆ ಸ್ಕ್ರೀನ್ ಶೇರ್ ಮಾಡ್ತಿದ್ದಾರೆ.
‘ಜವಾನ್’ ಚಿತ್ರದಲ್ಲಿ ಶಾರುಖ್ ಜೊತೆ ನಟಿಸುತ್ತಿದ್ದೇನೆ ಎಂಬ ಬಗ್ಗೆ ಖುಷಿಯಿದೆ. ಈ ಚಿತ್ರವನ್ನು ಜನ ಯಾವಾಗ ನೋಡ್ತಾರೋ ಅಂತಾ ನಾನು ಕಾಯ್ತಿದ್ದೀನಿ. ಶಾರುಖ್ ಖಾನ್ ಜೊತೆ ಕೆಲಸ ಮಾಡುವುದು ಮ್ಯಾಜಿಕಲ್ ಅನುಭವ. ಅವರು ನನ್ನನ್ನು ನೆನಪಿಟ್ಟುಕೊಂಡಿದ್ದಾರೆ ಎಂಬುದೇ ಖುಷಿಯ ವಿಚಾರ ಎಂದು ಪ್ರಿಯಾಮಣಿ ಬರೆದುಕೊಂಡಿದ್ದಾರೆ.
ನಾನು ಸೆಟ್ಗೆ ಬರುವಾಗ ಅವರಿಗೆ ನಾನು ನೆನಪಿರುತ್ತೇನಾ ಎಂಬ ಗೊಂದಲವಿತ್ತು. ಅವರು ನೆನಪಿಟ್ಟುಕೊಂಡು ಮಾತನಾಡಿದ ರೀತಿ ಖುಷಿಯಾಯ್ತು. ಈ ಹಿಂದೆ ಸಿನಿಮಾವೊಂದಕ್ಕಾಗಿ ಕೇವಲ ಒಂದು ಸಾಂಗ್ನಲ್ಲಿ ಶಾರುಖ್ ಜೊತೆ ನಟಿಸಿದ್ದೇ. ಈಗ ಮತ್ತೆ ತೆರೆಹಂಚಿಕೊಳ್ತಿರೋದು ಖುಷಿ ಕೊಟ್ಟಿದೆ ಎಂದು ಪ್ರಿಯಾಮಣಿ ರಿಯಾಕ್ಟ್ ಮಾಡಿದ್ದಾರೆ. ಆದರೆ ಸಿನಿಮಾದಲ್ಲಿ ನಟಿ ಪ್ರಿಯಾಮಣಿ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಗುಟ್ಟನ್ನು ಮಾತ್ರ ಬಿಟ್ಟುಕೊಟ್ಟಿಲ್ಲ.