ತೆಲುಗು ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟು ಬಳಿಕ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿರುವ ಬೆಂಗಳೂರಿನ ಹುಡುಗಿ ನಟಿ ಪ್ರಿಯಾಮಣಿ ಚಿತ್ರರಂಗದಲ್ಲಿ ಟಾಪ್ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಮದುವೆಯ ಬಳಿಕ ಕೊಂಚ ಮಟ್ಟಿಗೆ ಸಿನಿಮಾದ ಕೆಲಸಗಳಿಂದ ದೂರವಾಗಿದ್ದ ನಟಿ ಇದೀಗ ಮತ್ತೆ ಪ್ಲ್ಯಾಟ್ ಗೆ ಮರಳಿದ್ದಾರೆ. ಚಿತ್ರರಂಗಕ್ಕೆ ಎಂಟ್ರಿಕೊಟ್ಟು 20 ವರ್ಷ ಕಳೆದಿದ್ದರು ಇದುವರೆಗೂ ಯಾವುದೇ ಕಿಸ್ಸಿಂಗ್ ದೃಶ್ಯ ಅಥವಾ ಹಸಿ ಬಿಸಿ ದೃಶ್ಯಗಳಲ್ಲಿ ಪ್ರಿಯಾಮಣಿ ನಟಿಸಿಲ್ಲ. ಈ ಬಗ್ಗೆ ಸ್ವತಃ ಪ್ರಿಯಾಮಣಿ ಪ್ರತಿಕ್ರಿಯೆ ನೀಡಿದ್ದಾರೆ.
ತೆಲುಗು, ತಮಿಳು, ಮಲಯಾಳಂ, ಹಿಂದಿ ಚಿತ್ರಗಳಲ್ಲಿ ನಟಿಸಿರುವ ನಟಿ ಕನ್ನಡದಲ್ಲಿ ರಾಮ್, ಅಣ್ಣಾ ಬಾಂಡ್, ಕೋ ಕೋ, ವಿಷ್ಣುವರ್ಧನ, ಲಕ್ಷ್ಮಿ ಚಿತ್ರ ಸೇರಿದಂತೆ ಹಲವು ಚಿತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಈ ಹಿಂದೆ ಶಾರುಖ್ ಖಾನ್ ನಟನೆಯ ’ಚೆನ್ನೈ ಎಕ್ಸ್ಪ್ರೆಸ್’ ಸಿನಿಮಾದಲ್ಲಿನ ಹಾಡಿಗೆ ಹೆಜ್ಜೆ ಹಾಕಿದ್ದ ನಟಿ ಇದೀಗ ಮತ್ತೆ ಶಾರುಖ್ ಜೊತೆ ಸೊಂಟ ಬಳುಕಿಸಲು ಸಜ್ಜಾಗಿದ್ದಾರೆ. 20 ವರ್ಷಗಳ ಸಿನಿ ಜರ್ನಿಯಲ್ಲಿ ಭಿನ್ನ ಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದಿರೋ ಪ್ರಿಯಾಮಣಿ, ಕೋಟಿ ಸಂಭಾವನೆ ಕೊಟ್ರು ಹಾಟ್ ದೃಶ್ಯ, ಲಿಪ್ ಲಾಕ್ ಸೀನ್ಗಳಲ್ಲಿ ನಟಿಸೋದಿಲ್ಲ ಎಂದಿದ್ದಾರೆ.
ಸಿನಿಮಾದಲ್ಲಿ ನಟಿಸುವಾಗ ಅದು ಕೇವಲ ಒಂದು ಪಾತ್ರ ಆಗಿರುತ್ತದೆ. ಈ ಕಾರಣಕ್ಕೆ ಕೆಲವರು ಎಂತಹುದೇ ದೃಶ್ಯ ಇದ್ದರೂ ನಟಿಸುತ್ತಾರೆ. ಆದರೆ, ಕೆಲವರು ಮಡಿವಂತಿಕೆ ಕಾಪಾಡಿಕೊಂಡಿದ್ದಾರೆ. ಕಿಸ್ ದೃಶ್ಯಗಳಲ್ಲಿ, ಹಸಿಬಿಸಿ ದೃಶ್ಯಗಳಲ್ಲಿ ನಟಿಸೋಕೆ ನೋ ಎನ್ನುತ್ತಾರೆ. ಪ್ರಿಯಾಮಣಿ ಅವರು ಎರಡನೇ ಸಾಲಿಗೆ ಸೇರುತ್ತಾರೆ. ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ತೆರೆಮೇಲೆ ನಾನು ಕಿಸ್ ಮಾಡಲ್ಲ. ಅದಕ್ಕೆ ನಾನು ಯಾವಾಗಲೂ ನೋ ಎನ್ನುತ್ತೇನೆ. ನನಗೆ ಗೊತ್ತು ಅದು ಕೇವಲ ಪಾತ್ರ ಮತ್ತು ಅದು ನನ್ನ ಕೆಲಸ. ಆದರೆ, ಬೇರೆ ಪುರುಷನೊಂದಿಗೆ ತೆರೆಮೇಲೆ ಕಿಸ್ ಮಾಡಲು ನನಗೆ ಇರಿಸುಮುರುಸು ಉಂಟಾಗುತ್ತದೆ. ನಾನು ಉತ್ತರ ಕೊಡಬೇಕಾಗಿರುವುದು ನನ್ನ ಗಂಡನಿಗೆ ಮಾತ್ರ ಎಂದಿದ್ದಾರೆ.
2017ರಲ್ಲಿ ಮುಸ್ತಫಾ ರಾಜ್ ಅವರನ್ನು ಪ್ರಿಯಾಮಣಿ ಮದುವೆ ಆದರು. ಮದುವೆ ನಂತರ ಪಾತ್ರಗಳನ್ನು ಮಾಡುತ್ತಿಲ್ಲ. ಆ ರೀತಿಯ ದೃಶ್ಯಗಳಲ್ಲಿ ಕಾಣಿಸಿಕೊಳ್ಳದೇ ಇರೋದು ನನ್ನ ಜವಾಬ್ದಾರಿ ಎನಿಸುತ್ತದೆ. ಇತ್ತೀಚೆಗೆ ನಿರ್ದೇಶಕರೊಬ್ಬರು ಬಂದು ಸಿನಿಮಾ ಕಥೆ ಹೇಳಿದರು. ಅದರಲ್ಲಿ ಕಿಸ್ ದೃಶ್ಯ ಇತ್ತು. ನಾನು ಮಾಡಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾಗಿ ನಟಿ ಪ್ರತಿಕ್ರಿಯಿಸಿದ್ದಾರೆ.
ಅನ್ಯ ಧರ್ಮೀಯರನ್ನು ಇಷ್ಟಪಟ್ಟು ಮದುವೆ ಆಗುವುದೇ ತಪ್ಪು ಎನ್ನುವ ಅರ್ಥದಲ್ಲಿ ಮಾತನಾಡುತ್ತಿದ್ದಾರೆ. ನಾನು ಯಾರನ್ನು ಇಷ್ಟಪಟ್ಟೆನೋ ಅವರನ್ನು ಮದುವೆಯಾಗಿದ್ದೇನೆ. ಪ್ರೀತಿಯಲ್ಲಿ ಜಾತಿ, ಧರ್ಮಗಳು ಇರುವುದಿಲ್ಲ. ಬೇರೆ ಧರ್ಮ ಅಥವಾ ಜಾತಿಯವರನ್ನು ಮದುವೆಯಾದರೆ ಏನು ತಪ್ಪು? ಎಂದು ಪ್ರಶ್ನೆ ಮಾಡಿದ್ದಾರೆ.
ನನ್ನ ಮದುವೆಯನ್ನು ಹಲವರು ವಿರೋಧಿಸಿದರು. ಕೆಲವರು ಒಪ್ಪಿದರು. ನಾನು ನನ್ನ ಹುಡುಗನನ್ನು ಮತ್ತು ಮದುವೆಯನ್ನು ಒಪ್ಪಿಕೊಳ್ಳಿ ಎಂದು ಯಾವತ್ತೂ ಹೇಳಿಲ್ಲ. ಒಪ್ಪುವುದು ಮತ್ತು ಬಿಡುವುದು ಅವರಿಗೆ ಬಿಟ್ಟ ವಿಚಾರ. ಆದರೆ, ಮುಸ್ಲಿಂ ವ್ಯಕ್ತಿಯನ್ನು ಮದುವೆ ಆಗಿದ್ದೇನೆ ಎನ್ನುವ ಕಾರಣಕ್ಕಾಗಿ ಹಿಂಸೆ ನೀಡುವುದು ಸರಿಯಲ್ಲ. ನಾನು ಆಧುನಿಕ ಭಾರತದಲ್ಲಿ ಬದುಕುತ್ತಿದ್ದೇವೆ. ಭಾರತ ಜಾತ್ಯತೀತ ರಾಷ್ಟ್ರ ಎಂದಿದ್ದಾರೆ. ಈ ಮೂಲಕ ಮಸ್ಲಿಂರೆಲ್ಲಾ ಐಸಿಸ್ ಆಗಲ್ಲ, ಮುಸ್ಲಿಂ ವ್ಯಕ್ತಿಯನ್ನು ಮದುವೆ ಆಗಿದ್ದೇ ತಪ್ಪಾ ಎಂದು ಸಂದರ್ಶನದಲ್ಲಿ ಪ್ರಶ್ನಿಸಿದ್ದಾರೆ.