ಬಾಲಿವುಡ್ ನ ವಿವಾದಿತ ನಟಿ ರಾಖಿ ಸಾವಂತ್ ತಮ್ಮ ಮಾಜಿ ಪತಿ ಆದಿಲ್ ಎರಡನೇ ಮದುವೆಯನ್ನು ಕೋತಿ ಮದುವೆಗೆ ಹೋಲಿಸಿದ್ದಾರೆ. ಮೈಸೂರು ಹುಡುಗ ಆದಿಲ್ ನನ್ನು ತಾವು ಮದುವೆ ಆಗಿರುವುದಾಗಿ ಘೋಷಿಸಿಕೊಂಡಿದ್ದರು ಬಾಲಿವುಡ್ ನಟಿ ರಾಖಿ ಸಾವಂತ್. ಅದಕ್ಕೆ ಸಂಬಂಧಿಸಿದ ಫೋಟೋ ಕೂಡ ರಿಲೀಸ್ ಮಾಡಿದ್ದರು. ನಂತರ ಇಬ್ಬರ ಮಧ್ಯ ಗಲಾಟೆ ಆಯಿತು. ಆದಿಲ್ ನನ್ನು ಜೈಲಿಗೆ ಕಳುಹಿಸಿದ್ದರು. ಜೈಲಿನಿಂದ ಆಚೆ ಬಂದ ಮೇಲೆ ಆದಿಲ್ ಮತ್ತೊಂದು ಮದುವೆ ಆಗಿದ್ದಾರೆ. ಆ ಮದುವೆಯನ್ನು ಕೋತಿ ಮದುವೆಗೆ ಹೋಲಿಸಿ ರಾಖಿ ಸಾವಂತ್ ಗೇಲಿ ಮಾಡಿದ್ದಾರೆ.
ಆದಿಲ್ ಖಾನ್ ಇತ್ತೀಚೆಗಷ್ಟೇ ಬಿಗ್ ಬಾಸ್ ಸ್ಪರ್ಧಿ ಸೋಮಿ ಖಾನ್ ಜೊತೆ ಮದುವೆ ಆಗಿದ್ದಾರೆ. ಮೊನ್ನೆಯಷ್ಟೇ ಮೊದಲ ಬಾರಿಗೆ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ. ನಾನು ರಾಖಿ ಸಾವಂತ್ ಜೊತೆ ಮದುವೆ ಆಗಿರಲಿಲ್ಲ. ಸೋಮಿ ಖಾನ್ ಜೊತೆಗಿನ ಮದುವೆಯೇ ನನ್ನ ಮೊದಲ ಮದುವೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಜೊತೆಗೆ ತಮ್ಮ ಮದುವೆ ವಿಚಾರವನ್ನೂ ಖಚಿತ ಪಡಿಸಿದ್ದರು.
ಆದಿಲ್ ಖಾನ್ ಜೈಪುರನಲ್ಲಿ ಅದ್ದೂರಿಯಾಗಿ ‘ಬಿಗ್ ಬಾಸ್ ಹಿಂದಿ 12’ರ ಸ್ಪರ್ಧಿ ಸೋಮಿ ಖಾನ್ ಅವರನ್ನು ವಿಹವಾಗಿದ್ದಾರೆ. ಮಾರ್ಚ್ 2ರಂದು ಕುಟುಂಬಸ್ಥರ ಸಮ್ಮುಖದಲ್ಲಿ ಈ ಜೋಡಿ ನಿಖಾ ಆಗಿದ್ದು ಆ ಬಳಿಕ ಮದುವೆಯ ಸುದ್ದಿಯನ್ನು ಆದಿಲ್ ರಿವೀಲ್ ಮಾಡಿದ್ದಾರೆ. ಆದಿಲ್ ಮದುವೆಯ ವಿಚಾರಕ್ಕೆ ಸ್ಪಷ್ಟನೆ ನೀಡುತ್ತಿದ್ದಂತೆ ರಾಖಿ ಸಾವಂತ್ ಅವರ ಮದುವೆಯನ್ನು ಕೋತಿ ಮದುವೆಗೆ ಹೋಲಿಸಿದ್ದಾರೆ.