‘ಕನ್ನಡತಿ’ ಧಾರಾವಾಹಿ ಮೂಲಕ ಜನರ ಮನಸ್ಸು ಗೆದ್ದಿದ್ದ ನಟಿ ರಂಜನಿ ರಾಘವನ್ ಇದೀಗ ತಮ್ಮ ರಿಯಲ್ ಲೈಫ್ ಸಂಗಾತಿಯನ್ನು ಪರಿಚಯಿಸಿದ್ದಾರೆ. ಇಷ್ಟುದಿನಗಳ ಕಾಲ ಪ್ರೀತಿ ಹಾಗೂ ಮದುವೆ ವಿಚಾರದಲ್ಲಿ ಮೌನವಾಗಿದ್ದ ನಟಿ ಇದೀಗ ಏಕಾಏಕಿ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡು “ಇವನೇ ನನ್ನ ಹುಡುಗ” ಎಂದು ಹೇಳಿ ಶಾಕ್ ನೀಡಿದ್ದಾರೆ.
ರಂಜನಿ ರಾಘವನ್ ಅವರ ಹುಡುಗನ ಹೆಸರು ಸಾಗರ್ ಭಾರದ್ವಾಜ್. ಇವರು ಸೈಕ್ಲಿಸ್ಟ್, ಬೈಕರ್, ರನ್ನರ್ ಕೂಡ ಹೌದು. ಇಲ್ಲಿಯವರೆಗೆ ಅವರು 20000 ಕಿಮೀ ಸೈಕಲ್ ರೈಡ್ ಮಾಡಿದ್ದು, 2000 ಕಿಮೀ ರನ್ನಿಂಗ್ ಮಾಡಿದ್ದಾರೆ. ಅಷ್ಟೇ ಅಲ್ಲದೆ 100000ಕಿಮೀಗಳಿಗೂ ಜಾಸ್ತಿ ಬೈಕ್ ರೈಡ್ ಮಾಡಿದ್ದಾರೆ. ಇನ್ನು ಸಾಗರ್ ಭಾರದ್ವಾಜ್ ಅವರು ಎಲ್ಲಿಯವರು? ವೃತ್ತಿ ಏನು? ರಂಜನಿ ರಾಘವನ್ ಹಾಗೂ ಸಾಗರ್ ಭಾರದ್ವಾಜ್ ಅವರ ಪರಿಚಯ ಎಲ್ಲಿ ಆಯ್ತು? ಎಂಬ ಮಾಹಿತಿಯನ್ನು ರಂಜನಿ ಬಿಟ್ಟುಕೊಟ್ಟಿಲ್ಲ.
ರಂಜನಿ ರಾಘವನ್ ಅವರು ಕೆಲ ಧಾರಾವಾಹಿಗಳಲ್ಲಿ ನಟಿಸುವಾಗ ಸಹನಟರ ಜೊತೆ ಲವ್ನಲ್ಲಿದ್ದಾರೆ ಎಂದು ಗಾಸಿಪ್ ಹರಡಿತ್ತು. ಇವೆಲ್ಲ ಕೆಲವರು ಸೃಷ್ಟಿ ಮಾಡಿದ್ದು ಬಿಟ್ಟರೆ ಆ ಥರದ್ದು ಏನೂ ಇಲ್ಲ ಅಂತ ರಂಜನಿ ರಾಘವನ್ ಅವರೇ ಸ್ಪಷ್ಟನೆ ನೀಡಿದ್ದರು. ಈಗ ರಂಜನಿ ರಾಘವನ್ ಅವರೇ ಸ್ವತಂ ತಮ್ಮ ಲವ್ ಬಗ್ಗೆ ಹೇಳಿಕೊಂಡಿದ್ದಾರೆ.
ಏಕಾಏಕಿ ಸೋಶಿಯಲ್ ಮೀಡಿಯಾದಲ್ಲಿ ಸಾಗರ್ ಭಾರದ್ವಾಜ್ ಜೊತೆಗಿನ ಫೋಟೋ ಹಂಚಿಕೊಂಡ ರಂಜನಿ ರಾಘವನ್ ಅವರು “ನನ್ ಹುಡುಗ, ಜೀವನ ಸಂಗಾತಿ, BFF” ಎಂದು ಹೇಳಿಕೊಂಡಿದ್ದಾರೆ. ಅನೇಕರು ರಂಜನಿ ರಾಘವನ್ ಅವರಿಗೆ ಶುಭಾಶಯ ತಿಳಿಸಿದ್ದಾರೆ. ರಂಜನಿ ರಾಘವನ್ ಅವರೇ ಫೋಟೋ ಹಂಚಿಕೊಂಡಿದ್ದು ಸದ್ಯದಲ್ಲೇ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
ಸಂತೋಷ್ ಬಾಲರಾಜ್ ಹೀರೋ ಆಗಿರುವ ‘ಸತ್ಯಂ’ ಸಿನಿಮಾ, ‘ಕಾಂಗೂರು’, ‘ನೈಟ್ ಕರ್ಫ್ಯೂ’ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದರ ಜೊತೆಗೆ ವಿಜಯ್ ರಾಘವೇಂದ್ರ ಜೊತೆಗೆ ‘ಸ್ವಪ್ನಂ ಮಂಟಪ’ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ‘ಸತ್ಯಂ’, ‘ಸ್ವಪ್ನಂ ಮಂಟಪ’ ಚಿತ್ರಗಳು ಈ ವರ್ಷ ತೆರೆಗೆ ಬರಲಿವೆ.