ಸೌತ್ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಇತ್ತೀಚಿಗೆ ತಮ್ಮ ಸಹಾಯಕನ ಮದುವೆಗೆ ಸಾಕ್ಷಿಯಾಗುವ ಮೂಲಕ ಸುದ್ದಿಯಾಗಿದ್ದರು. ಈಗ ಆ ಮದುವೆಯಲ್ಲಿ ಧರಿಸಿದ ಸೀರೆ ವಿಚಾರವಾಗಿ ನಟಿ ಸುದ್ದಿಯಲ್ಲಿದ್ದಾರೆ. ರಶ್ಮಿಕಾ ಧರಿಸಿದ ಸಿಂಪಲ್ ಸೀರೆಯ ಬಗ್ಗೆ ಚರ್ಚೆಯಾಗಿದೆ. ಅದರ ಅಸಲಿ ಬೆಲೆ ಕೇಳಿದ್ರೆ ನೀವು ಅಚ್ಚರಿಪಡುತ್ತೀರಾ.
ಸಹಾಯಕ ಸಾಯಿ (Sai) ಮದುವೆ ಹೈದರಾಬಾದ್ನಲ್ಲಿ ಸರಳವಾಗಿ ನೆರವೇರಿತು. ತಮ್ಮ ಬ್ಯುಸಿ ಶೆಡ್ಯೂಲ್ ನಡುವೆ ಬಿಡುವು ಮಾಡಿಕೊಂಡು ರಶ್ಮಿಕಾ ಮಂದಣ್ಣ ಕೂಡ ಹಾಜರಿ ಹಾಕಿದ್ದರು. ಈ ಮದುವೆಯಲ್ಲಿ ನಟಿ ಗೋಲ್ಡನ್ ಬಣ್ಣದ ಸಿಂಪಲ್ ಸೀರೆಯಲ್ಲಿ ಮಿಂಚಿದ್ದರು. ಆ ಸಿಂಪಲ್ ಸೀರೆಗೆ 35 ಸಾವಿರ ರೂ. ಎಂದು ಹೇಳಲಾಗುತ್ತಿದೆ. ಸೀರೆಯ ಅಸಲಿ ಬೆಲೆ ಕೇಳಿ ಅಭಿಮಾನಿಗಳು ದಂಗಾಗಿದ್ದಾರೆ