ಫ್ರಾನ್ಸ್ನಲ್ಲಿ ನಡೆಯುತ್ತಿರುವ 2024ರ 77ನೇ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಮೊದಲ ಬಾರಿಗೆ ಹೆಜ್ಜೆ ಹಾಕುವ ಮೂಲಕ ನಟಿ ಶೋಭಿತಾ ಧೂಳಿಪಾಲ ಗಮನ ಸೆಳೆದಿದ್ದಾರೆ. ನೇರಳೆ ಬಣ್ಣದ ಕಾರ್ಡೆಲಿಯಾ ಜಂಪ್ಸೂಟ್ ದಿರಿಸಿನಲ್ಲಿ ನಟಿ ಬೆಕ್ಕಿನ ನಡಿಗೆಯಲ್ಲಿ ಮಿಂಚಿದ್ದಾರೆ.
ಕೇನ್ಸ್ಗೆ ಹೊರಡುವ ಮೊದಲು ಶೋಭಿತಾ ಧೂಳಿಪಾಲ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಫೋಟೋಸ್ಗೆ ಮನೋಹರವಾದ ಪೋಸ್ ನೀಡಿದರು. ಅಲ್ಲಿಂದ 77ನೇ ಕೇನ್ಸ್ ಚಲನಚಿತ್ರೋತ್ಸವದಲ್ಲಿ ತಮ್ಮ ಬಹು ನಿರೀಕ್ಷಿತ ಚೊಚ್ಚಲ ಪ್ರವೇಶ ಪಡೆದರು. ನೇರಳೆ ಬಣ್ಣದ ಸುಂದರ ದಿರಿಸಿನಲ್ಲಿ ತಮ್ಮ ಸೌಂದರ್ಯ ಪ್ರದರ್ಶಿಸಿದರು.
ಶೋಭಿತಾ ಧೂಳಿಪಾಲ ಧರಿಸಿದ್ದ ಆಕರ್ಷಕವಾದ ಜಂಪ್ಸೂಟ್ ಅನ್ನು ವಿನ್ಯಾಸಕಿ ನಮ್ರತಾ ಜೋಶಿಪುರ ವಿನ್ಯಾಸ ಮಾಡಿದ್ದಾರೆ. ಇಂತಹದ್ದೇ ದಿರಿಸನ್ನು ಕಳೆದ ವರ್ಷದ ಲ್ಯಾಕ್ಮೆ ಫ್ಯಾಶನ್ ವೀಕ್ನಲ್ಲಿ ನಟಿ ಅಥಿಯಾ ಶೆಟ್ಟಿ ಪ್ರದರ್ಶಿಸಿದ್ದರು. ಈ ಉಡುಪಿನ ಬೆಲೆ 1.8 ಲಕ್ಷ ರೂಪಾಯಿ ಆಗಿದೆ. ಕ್ಯಾನೆಸ್ ಫಿಲ್ಮ್ ಫೆಸ್ಟ್ನಲ್ಲಿ ಶೋಭಿತಾ ಮ್ಯಾಗ್ನಮ್ ಇಂಡಿಯಾ ಐಸ್ ಕ್ರೀಮ್ ಬ್ರ್ಯಾಂಡ್ ಅನ್ನು ಪ್ರತಿನಿಧಿಸಿದರು.
ಈ ವರ್ಷ ಕೇನ್ಸ್ ಫಿಲ್ಮ್ ಫೆಸ್ಟಿವಲ್ ನಲ್ಲಿ ನಟಿಯರಾದ ಐಶ್ವರ್ಯಾ ರೈ ಮತ್ತು ಅದಿತಿ ರಾವ್ ಹೈದರಿ, ಶೋಭಿತಾ ಧೂಳಿಪಾಲ, ಕಿಯಾರಾ ಅಡ್ವಾಣಿ, ಜಾಕ್ವೆಲಿನ್ ಫರ್ನಾಂಡಿಸ್ ಸಾಕಷ್ಟು ಭಾರತೀಯ ತಾರೆಯನ್ನು ಬೆಕ್ಕಿನ ನಡಿಗೆಯಲ್ಲಿ ಹೆಜ್ಜೆ ಹಾಕಿದ್ದಾರೆ.