ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ನಡುವೆ ಬಿರುಕು ಮೂಡಿದೆ. ಸದ್ಯ ಇಬ್ಬರು ದೂರ ದೂರವಾಗಿದ್ದು ಡಿವೋರ್ಸ್ ಪಡೆದುಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಇಬ್ಬರೂ ಯಾಕೆ ದೂರ ಆಗುತ್ತಿರುವುದು ಏಕೆ ಎನ್ನುವುದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ. ಈ ಮಧ್ಯೆ ಎಲ್ಲರೂ ಅಭಿಷೇಕ್ನ ಟ್ರೋಲ್ ಮಾಡುತ್ತಿದ್ದಾರೆ. ಈ ಮಧ್ಯೆ ಬಾಲಿವುಡ್ ನಟಿ ಸಿಮಿ ಗರೇವಾಲ್ ಅವರು ಅಭಿಷೇಕ್ ಪರವಾಗಿ ಮಾತನಾಡಿ ಸಾಕಷ್ಟು ಟ್ರೋಲ್ ಆಗಿದ್ದಾರೆ. ಆ ಬಳಿಕ ಪೋಸ್ಟ್ ಡಿಲೀಟ್ ಮಾಡಿದ್ದಾರೆ
ಅಭಿಷೇಕ್ ಹಾಗೂ ಐಶ್ವರ್ಯಾ ಬೇರೆ ಆಗಲು ಕಾರಣ ಏನು ಎಂಬುದು ಇನ್ನೂ ರಿವೀಲ್ ಆಗಿಲ್ಲ. ಈ ತಿಂಗಳ ಆರಂಭದಲ್ಲಿ ಐಶ್ವರ್ಯಾ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಇದಕ್ಕೆ ಅಭಿಷೇಕ್ ಕಡೆಯಿಂದ ಯಾವುದೇ ವಿಶ್ ಬಂದಿಲ್ಲ. ಇದರಿಂದ ವಿಚ್ಛೇದನ ವಿಚಾರ ಖಚಿತ ಆದಂತೆ ಆಗಿದೆ. ಐಶ್ವರ್ಯಾ ಅವರು ಬಚ್ಚನ್ ಕುಟುಂಬದ ಜೊತೆ ಕಾಣಿಸಿಕೊಂಡಿಲ್ಲ. ಈ ಮಧ್ಯೆ ಅಭಿಷೇಕ್ ಪರವಾಗಿ ಸಿಮಿ ಮಾತನಾಡಿದ್ದರು.
‘ಅಭಿಷೇಕ್ ಅವರನ್ನು ವೈಯಕ್ತಿಕವಾಗಿ ತಿಳಿದಿರುವ ಪ್ರತಿಯೊಬ್ಬರೂ ಅವರು ಬಾಲಿವುಡ್ನ ಉತ್ತಮ ವ್ಯಕ್ತಿಗಳಲ್ಲಿ ಒಬ್ಬರು ಎಂದು ಒಪ್ಪಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ. ಉತ್ತಮ ಮೌಲ್ಯಗಳು ಮತ್ತು ಸಹಜವಾದ ಸಭ್ಯತೆ ಅವರಿಗೆ ಇದೆ’ ಎಂದು ಸಿಮಿ ಹೇಳಿದ್ದರು.
‘ವಿವಾದಾತ್ಮಕ ಹೇಳಿಕೆ. ನೀವು ಈ ರೀತಿ ಪೋಸ್ಟ್ ಮಾಡಿದ್ದು ಸರಿ ಅಲ್ಲ’ ಎಂದು ಕೆಲವರು ಹೇಳಿದ್ದಾರೆ. ಐಶ್ವರ್ಯಾ ಅವರು ಕೆಟ್ಟವರು ಎಂದರ್ಥವೇ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ಸಿಮಿ ಅವರನ್ನು ಟ್ರೋಲ್ ಮಾಡಿದ್ದಾರೆ. ಆ ಬಳಿಕ ಸಿಮಿ ಈ ಪೋಸ್ಟ್ನ ಡಿಲೀಟ್ ಮಾಡಿದ್ದಾರೆ.
ಅಭಿಷೇಕ್ ಹಾಗೂ ಐಶ್ವರ್ಯಾ ಅವರು ಮದುವೆ ಆಗಿ 17 ವರ್ಷಗಳು ಕಳೆದಿವೆ. ಇವರಿಗೆ ಆರಾಧ್ಯಾ ಬಚ್ಚನ್ ಹೆಸರಿನ ಮಗಳು ಇದ್ದಾಳೆ. ಈ ವರ್ಷದ ಆರಂಭದಿಂದಲೇ ಇವರು ದೂರ ಆಗಿದ್ದಾರೆ ಎನ್ನುವ ಸುದ್ದಿ ಇದೆ. ಅಂಬಾನಿ ಕುಟುಂಬದ ಮದುವೆಗೆ ಐಶ್ವರ್ಯಾ ಹಾಗೂ ಅಭಿಷೇಕ್ ಪ್ರತ್ಯೇಕವಾಗಿ ಬಂದಿದ್ದರು. ಐಶ್ವರ್ಯಾ ಸದ್ಯ ತಾಯಿ ಹಾಗೂ ಮಗಳೊಂದಿಗೆ ವಾಸವಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಐಶ್ವರ್ಯಾ ಸದ್ಯ ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ.