ಹಿರಿಯ ನಟ, ರಾಜಕಾರಣಿ ಶತ್ರುಘ್ನ ಸಿನ್ಹಾ ಅವರ ಪುತ್ರಿ, ನಟಿ ಸೋನಾಕ್ಷಿ ಸಿನ್ಹಾ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಸೋನಾಕ್ಷಿ ಬಾಲಿವುಡ್ ನಟ ಜಹೀರ್ ಇಕ್ಬಾಲ್ ಅವರನ್ನು ವರಿಸುತ್ತಿದ್ದಾರೆ. ಸೋನಾಕ್ಷಿ ಹಾಗೂ ಜಹೀರ್ ಪ್ರೀತಿಸುತ್ತಿದ್ದು ಮದುವೆಗೆ ಇಬ್ಬರ ಕುಟುಂಬದ ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ.
ಸೋನಾಕ್ಷಿ ಹಾಗೂ ಇಕ್ಬಾಲ್ ಜೂನ್ 23ರಂದು ದಾಂಪತ್ಯ ಬದುಕಿಗೆ ಕಾಲಿಡಲಿದ್ದಾರೆ ಎಂದು ಖಚಿತ ಮೂಲಗಳು ಮಾಹಿತಿ ನೀಡಿವೆ. 2019ರಲ್ಲಿ ಬಾಲಿವುಡ್ಗೆ ಕಾಲಿಟ್ಟ ಜಹೀರ್ ಇಕ್ಬಾಲ್, ವಯಸ್ಸಿನಲ್ಲೂ ಮತ್ತು ಸಿನಿಮಾರಂಗದಲ್ಲಿನ ಅನುಭವದಲ್ಲೂ ಸೋನಾಕ್ಷಿಗಿಂತ ಚಿಕ್ಕವರು. ‘ನೋಟ್ಬುಕ್’ ಚಿತ್ರದ ಮೂಲಕ ಬಾಲಿವುಡ್ಗೆ ಎಂಟ್ರಿ ನೀಡಿದ್ದ ಜಹೀರ್, ಆನಂತರ 2022ರಲ್ಲಿ ಸೋನಾಕ್ಷಿ ಸಿನ್ಹಾ ಜೊತೆಗೆ ‘ಡಬಲ್ ಎಕ್ಸ್ಎಲ್’ ಸಿನಿಮಾದಲ್ಲಿ ನಟಿಸಿದರು. ಈ ಚಿತ್ರದಿಂದಲೇ ಸೋನಾಕ್ಷಿ ಮತ್ತು ಜಹೀರ್ ನಡುವೆ ಪ್ರೀತಿ ಹುಟ್ಟಿಕೊಂಡಿತು ಎಂದು ಹೇಳಲಾಗಿದೆ.
ಜೂನ್ 23ರಂದು ಮುಂಬೈನಲ್ಲಿ ಸೋನಾಕ್ಷಿ ಸಿನ್ಹಾ ಅವರ ಮದುವೆ ನಡೆಯಲಿದ್ದು, ಬಹಳ ಖಾಸಗಿಯಾಗಿ ಈ ವಿವಾಹ ಸಮಾರಂಭ ಜರುಗಲಿದೆ. ಮದುವೆಗೆ ಎರಡೂ ಕಡೆಯ ಕುಟುಂಬಸ್ಥರು ಒಪ್ಪಿಗೆ ಸೂಚಿಸಿದ್ದಾರೆ. ಅಂದಹಾಗೆ, ‘ಡಬಲ್ ಎಕ್ಸ್ಎಲ್’ ಬಳಿಕ Ammy Virk & Asees Kaur: Blockbuster ಎಂಬ ಮ್ಯೂಸಿಕ್ ವಿಡಿಯೋದಲ್ಲೂ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿತ್ತು. ಇಬ್ಬರು ಆಗಾಗ ತಮ್ಮ ಸೋಶಿಯಲ್ ಮೀಡಿಯಾ ಪೋಸ್ಟ್ಗಳ ಮೂಲಕ ಗಮನಸೆಳೆಯುತ್ತಿದ್ದರು. ಇದೀಗ ಅದೆಲ್ಲದಕ್ಕೂ ಉತ್ತರ ಸಿಕ್ಕಿದ್ದು, ತಮ್ಮ ಬಾಯ್ಫ್ರೆಂಡ್ ಜೊತೆಗೆ ಸೋನಾಕ್ಷಿ ಸಿನ್ಹಾ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.