ಇತ್ತೀಚೆಗೆ ಸಿನಿಮಾ ರಂಗದ ಮೇಲೆ ಸಿನಿ ಅಭಿಮಾನಿಗಳು ಬೇಸರಿಕೊಳ್ಳುತ್ತಿದ್ದಾರೆ. ಅಸಹ್ಯ ಎನಿಸುವಂತಹ ಅನೇಕ ಸಂಗತಿಗಳು ಚಿತ್ರರಂಗದಲ್ಲಿ ನಡೆಯುತ್ತಿದ್ದು ಇದರಿಂದ ಜನ ಸಿನಿಮಾ ನೋಡಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದೀಗ ಅತ್ತಂದೆ ಘಟನೆಯೊಂದು ತೆಲುಗು ಚಿತ್ರ್ಯೋದ್ಯಮದಲ್ಲಿ ನಡೆದಿದೆ.
ವಿಜಯ್ ದೇವರಕೊಂಡ ಸಹೋದರ ಆನಂದ್ ದೇವರಕೊಂಡ ಕೂಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದು ಈಗಾಗಲೆ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದ್ರೆ ಸಹೋದರ ವಿಜಯ್ ದೇವರಕೊಂಡರಂತೆ ಆನಂದ್ ದೇವರಕೊಂಡಾಗೆ ಇನ್ನೂ ಯಶಸ್ಸು ಸಿಕ್ಕಿಲ್ಲ. ಈ ಮಧ್ಯೆ ಆನಂದ್ ಬೇಬಿ ಸಿನಿಮಾದಲ್ಲಿ ನಟಿಸುತ್ತಿದ್ದು ಸದ್ಯ ಈ ಸಿನಿಮಾದ ಪೋಸ್ಟರ್ ರಿಲೀಸ್ ಆಗಿದ್ದು ವಿವಾದ ಹುಟ್ಟುಹಾಕಿದೆ. ಬೇಬಿ ಸಿನಿಮಾದ ಪೋಸ್ಟರ್ನಲ್ಲಿ ನಾಯಕನ ನಡು ಬೆರಳ ಮೇಲೆ ನಾಯಕಿಯನ್ನು ನಿಲ್ಲಿಸಲಾಗಿದೆ. ಈ ಪೋಸ್ಟರ್ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದೆ.
ಸಾಮಾನ್ಯವಾಗಿ ಮಧ್ಯದ ಬೆರಳನ್ನು ತೋರಿಸುವುದು ಕೆಟ್ಟ ಸೂಚನೆಯನ್ನು ತೋರಿಸುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಕಾನೂನಿನಲ್ಲಿ ಇದಕ್ಕೂ ಶಿಕ್ಷೆಯಿದೆ. ಇಷ್ಟೆಲ್ಲ ಗೊತ್ತಿದ್ದರೂ, ನಾಯಕಿಯ ಫೋಟೋವನ್ನು ಎಡಿಟ್ ಮಾಡಿ, ಮಧ್ಯದ ಬೆರಳ ಮೇಲೆ ನಿಲ್ಲಿಸಲಾಗಿದೆ. ಈ ಕುರಿತು ನಾಯಕಿ ವೈಷ್ಣವಿ ಚೈತನ್ಯ ಯಾವುದೇ ಪ್ರತಿಕ್ರಿಯೆ ನೀಡದೆ ಇರುವುದು ಅಚ್ಚರಿ ಮೂಡಿಸಿದೆ.
ವಿಜಯ್ ದೇವರಕೊಂಡ ನಟನೆಯ ಮೊದಲ ಸಿನಿಮಾ ಅರ್ಜುನ್ ರೆಡ್ಡಿಯಲ್ಲಿ ಸೆಕ್ಸ್ ಅನ್ನು ವೈಭವೀಕರಿಸುವ ಕೆಲಸವನ್ನು ನಿರ್ದೇಶಕರು ಮಾಡಿದ್ದರು. ನಾಯಕ ವಿಜಯ್, ತನ್ನ ಸಹಪಾಠಿ ಜೊತೆ ಸೆಕ್ಸ್ (Sex) ಮಾಡುವಂತಹ ಸನ್ನಿವೇಶವನ್ನೂ ಸಿನಿಮಾದಲ್ಲಿ ತೋರಿಸುವ ಮೂಲಕ ಈ ಸಿನಿಮಾ ಬೋಲ್ಡ್ ಎಂದು ತೋರಿಸುವ ಪ್ರಯತ್ನಕ್ಕೆ ನಿರ್ದೇಶಕರು ಕೈ ಹಾಕಿದ್ದರು. ಈ ಸನ್ನಿವೇಶ ಕೂಡ ಕೆಲವರ ಕಂಗಣ್ಣಿಗೆ ಗುರಿಯಾಗಿತ್ತು. ಇದೀಗ ವಿಜಯ್ ಸಹೋದರ ಆನಂದ್ ದೇವರಕೊಂಡ ಸಿನಿಮಾದ ಪೋಸ್ಟರ್ ಕೂಡ ವಿವಾದಕ್ಕೆ ಕಾರಣವಾಗಿದೆ.