ರಣಬೀರ್ ಕಪೂರ್, ರಶ್ಮಿಕಾ ಮಂದಣ್ಣ , ತೃಪ್ತಿ ದಿಮ್ರಿ ನಟನೆಯ ಅನಿಮಲ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಆದರೆ ಈ ಸಿನಿಮಾ ಸ್ರೀ ವಿರೋಧಿ ಎಂಬ ಮಾತುಳು ಕೇಳಿ ಬಂದಿತ್ತು. ಇದೀಗ ಆ ಬಗ್ಗೆ ಪ್ರತಿಕ್ರಿಯಿಸಿರುವ ನಟಿ ತೃಪ್ತಿ ದಿಮ್ರಿ ಅನಿಮಲ್ ಸ್ತ್ರೀ ವಿರೋಧೀ ಸಿನಿಮಾ ಅಲ್ಲ ಎಂದಿದ್ದಾರೆ.
ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ನಟಿ ತೃಪ್ತಿ ದಿಮ್ರಿಗೆ ಮುಖ್ಯವಾದ ಪ್ರಶ್ನೆಯೊಂದು ಎದುರಾಗಿದೆ. ‘ಕಲಾ ರೀತಿಯ ಮಹಿಳಾ ಪ್ರಧಾನ ಸಿನಿಮಾ ಮಾಡಿದ ಬಳಿಕ ಅನಿಮಲ್ ರೀತಿಯ ಮಹಿಳಾ ವಿರೋಧಿ ಸಿನಿಮಾವನ್ನು ನೀವು ಒಪ್ಪಿಕೊಂಡಿದ್ದು ಯಾಕೆ’ ಎಂದು ಪ್ರಶ್ನೆ ಕೇಳಲಾಗಿದೆ. ಅದಕ್ಕೆ ಉತ್ತರಿಸಿದ ನಟಿ, ‘ನಾವು ಯಾವುದೇ ಸಿನಿಮಾವನ್ನು ಸ್ತ್ರೀ ವಿರೋಧಿ ಎಂಬ ರೀತಿಯಲ್ಲಿ ನೋಡುವುದಿಲ್ಲ. ಸಿನಿಮಾಗಳಿಗೆ ನಾನು ಅಂತಹ ಹಣೆಪಟ್ಟಿ ನೀಡುವುದಿಲ್ಲ. ಬುಲ್ ಬುಲ್ ಮತ್ತು ಕಲಾ ಸಿನಿಮಾವನ್ನು ಮಾಡುವಾಗ ನಾನು ಸ್ತ್ರೀವಾದಿ ಸಿನಿಮಾ ಮಾಡುತ್ತಿದ್ದೇನೆ ಅಂತ ಯೋಚಿಸಿರಲಿಲ್ಲ. ನಾನು ಪಾತ್ರಗಳ ಜೊತೆ ಕನೆಕ್ಟ್ ಆಗುತ್ತೇನೆ. ನಿರ್ದೇಶಕರ ಮೇಲೆ ನಂಬಿಕೆ ಇಡುತ್ತೇನೆ. ಆ ಸಿನಿಮಾ ಮಾಡಬೇಕು ಅಂತ ನನಗೆ ಅನಿಸಬೇಕು ಅಷ್ಟೇ’ ಎಂದು ಹೇಳಿದ್ದಾರೆ.
‘ನನಗೆ ಅನಿಮಲ್ ಸಿನಿಮಾದ ಆಫರ್ ಬಂದಾಗ ನಿರ್ದೇಶಕ ಸಂದೀಪ್ ರೆಡ್ಡಿ ವಂಗ ಅವರು ನನ್ನನ್ನು ಭೇಟಿಯಾಗಿ ಕಥೆ ವಿವರಿಸಿದರು. ಅವರು ಕಥೆಯ ಬಗ್ಗೆ ನನಗೆ ಹೆಚ್ಚೇನೂ ಹೇಳಿರಲಿಲ್ಲ. ನನ್ನ ಪಾತ್ರವನ್ನು ವಿವರಿಸಿದರು. ನನಗೆ ಇಷ್ಟ ಆಗಿದ್ದು ಏನೆಂದರೆ, ಈವರೆಗೂ ನಾನು ಒಳ್ಳೆಯ ಪಾತ್ರಗಳನ್ನು ಮಾಡಿದ್ದೇನೆ. ಕಥೆಯ ಅಂತ್ಯದಲ್ಲಿ ಆ ಪಾತ್ರಗಳಿಗೆ ಪ್ರೇಕ್ಷಕರು ಕರುಣೆ ತೋರುತ್ತಾರೆ. ಆದರೆ ಈಗ ಮಾಡಬೇಕಿರುವುದು ಬೇರೆ ಆಗಿತ್ತು’ ಎಂದಿದ್ದಾರೆ ತೃಪ್ತಿ ದಿಮ್ರಿ.
ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ್ದ ‘ಅನಿಮಲ್’ ಸಿನಿಮಾಗೆ ಅನೇಕರು ಖಂಡನೆ ವ್ಯಕ್ತಪಡಿಸಿದ್ದರು. ಸಿನಿಮಾದಲ್ಲಿ ಮಹಿಳೆಯರಿಗೆ ಅವಹೇಳನ ಆಗುವಂತಹ ದೃಶ್ಯಗಳು ಇವೆ ಎಂದು ಟೀಕಿಸಲಾಯಿತು.