ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುವ ಬಾಲಿವುಡ್ ನಟಿ ಊರ್ವಶಿ ರೌಟೇಲಾ ಇದೀಗ ದುಬಾರಿ ಡ್ರೆಸ್ ಧರಿಸಿರುವ ಕಾರಣದಿಂದಾಗಿ ಸುದ್ದಿಯಾಗಿದ್ದಾರೆ. ಇತ್ತೀಚೆಗೆ ಊರ್ವಶಿ ಗೋಲ್ಡನ್ ಬಣ್ಣದ ಬಟ್ಟೆ ಧರಿಸಿ ಫೋಟೋ ಶೂಟ್ ಮಾಡಿಸಿದ್ದು ಈಕೆ ಧರಿಸಿರುವ ಬಟ್ಟೆಯ ಬೆಲೆ ಕೇಳಿದ್ರೆ ನೀವು ಶಾಕ್ ಆಗ್ತೀರಾ.
ನಟಿ ಊರ್ವಶಿ ರೌಟೇಲಾ ಇತ್ತೀಚಿಗೆ ಅವಾರ್ಡ್ ಫಂಕ್ಷನ್ವೊಂದರಲ್ಲಿ ಭಾಗವಹಿಸಿದ್ದು ಈ ವೇಳೆ ದುಬಾರಿ ಬೆಲೆಯ ಗೋಲ್ಡನ್ ಕಲರ್ ಡ್ರೆಸ್ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಕಾರ್ಯಕ್ರಮದ ಕೇಂದ್ರ ಬಿಂದುವಾಗಿ ಎಲ್ಲರ ಗಮನ ಸೆಳೆದಿದ್ದಾರೆ. ಫ್ಯಾಷನ್ ಈವೆಂಟ್ನಲ್ಲಿ ಡಿಸೈನರ್ ಮೋನಿಶಾ ಜೈಸಿಂಗ್ ಅವರ ಸ್ಪೆಷಲ್ ಕಲೆಕ್ಷನ್ನಲ್ಲಿ ಈ ಉಡುಪನ್ನು ನಟಿ ಆಯ್ಕೆ ಮಾಡಿದ್ದಾರೆ.
ಊರ್ವಶಿ ರೌಟೇಲಾ ಚಿನ್ನದಂತೆ ಹೊಳೆಯುತ್ತಿರುವ ಈ ಉಡುಪಿನಲ್ಲಿ ಮಿಂಚಿದ್ದಾರೆ. ಬೀಜ್ ಧೋತಿ ಶೈಲಿಯ ಸ್ಕರ್ಟ್ ನೋಡಲು ಆಕರ್ಷಕವಾಗಿ ಊರ್ವಶಿ ಕಾಣಿಸಿಕೊಂಡಿದ್ದಾರೆ. ಈ ಡ್ರೆಸ್ ತೊಟ್ಟು ನಟಿ ಎಲ್ಲರನ್ನು ಬೆರಗುಗೊಳಿಸಿದ್ದಾರೆ. ಮೂಲಗಳ ಪ್ರಕಾರ, ಊರ್ವಶಿ ರೌಟೇಲಾ ಅವರ ಐಷಾರಾಮಿ ಗೋಲ್ಡನ್ ಡ್ರೆಸ್ ಬೆಲೆ 30 ಲಕ್ಷ ಎಂದು ಹೇಳಲಾಗುತ್ತಿದೆ.