ತಮಿಳು, ಮಲಯಾಳಂ, ತೆಲುಗು, ಕನ್ನಡ ಹೀಗೆ ಹಲವು ಭಾಷೆಯ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ನಟಿ ಊರ್ವಶಿ 90ರ ದಶಕದಲ್ಲಿ ತನ್ನ ಸೌಂದರ್ಯದಿಂದಲೇ ಕೋಟ್ಯಾಂತರ ಅಭಿಮಾನಿಗಳ ಮನಸೆಳೆದ ನಟಿ.
ಬಾಲನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಊರ್ವಶಿ ಈಗ ಕೆಲ ವರ್ಷಗಳಿಂದ ತಾಯಿಯಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ.
ಭಾಗ್ಯರಾಜ್ ನಿರ್ದೇಶನದ ತಮಿಳಿನ ‘ಮುಂತಾನೈ ಮುಡಿಚು’ ಚಿತ್ರದಲ್ಲಿ ನಾಯಕಿಯಾಗಿ ಸಿನಿಮಾ ಜಗತ್ತಿಗೆ ಕಾಲಿಟ್ಟರು. ಕವಿತಾ ರಂಜನಿಯಾಗಿದ್ದ ನಟಿ ತಮ್ಮ ಹೆಸರನ್ನು ಚಿತ್ರಕ್ಕಾಗಿ ಊರ್ವಶಿ ಎಂದು ಬದಲಾಯಿಸಿಕೊಂಡರು.
ತಮಿಳು ಚಿತ್ರರಂಗದ ಪ್ರಮುಖ ನಟಿಯಾಗಿದ್ದ ಊರ್ವಶಿ 2000ರಲ್ಲಿ ಕೇರಳದ ನಟ ಮನೋಜ್ ಜೈನ್ ಅವರನ್ನು ಪ್ರೀತಿಸಿ ವಿವಾಹವಾದರು. ಮದುವೆಯಾದ 8 ವರ್ಷಗಳ ನಂತರ ಇಬ್ಬರ ನಡುವೆ ಮನಸ್ತಾಪ ಉಂಟಾಗಿ ವಿಚ್ಛೇದನ ಪಡೆದಿದ್ದು, ದಂಪತಿಗೆ ತೇಜಲಕ್ಷ್ಮಿ ಎಂಬ ಮಗಳಿದ್ದಾಳೆ.
ಊರ್ವಶಿಯವರ ಕುಡಿತದ ಚಟದಿಂದಾಗಿ ಮಗಳು ಹಾಗೂ ಪತಿಯಿಂದ ದೂರವಾದರು. ಸದ್ಯ ಊರ್ವಶಿ ಪುತ್ರಿ ತೇಜಲಕ್ಷ್ಮಿ ತಂದೆ ಮನೋಜ್ ಜೊತೆ ವಾಸವಾಗಿದ್ದಾರೆ. 2013ರಲ್ಲಿ ಊರ್ವಶಿ ಶಿವಪ್ರಸಾದ್ ಅವರನ್ನು ಊರ್ವಶಿ ಮರುಮದುವೆಯಾಗಿದ್ದು, 43ನೇ ವಯಸ್ಸಿನಲ್ಲಿ ಮಗನಿಗೆ ಜನ್ಮ ನೀಡಿದ್ರು.
ನಟಿ ಊರ್ವಶಿ ತಮ್ಮ ಮಗಳು ಮತ್ತು ಮಗನ ಫೋಟೋಗಳನ್ನು ಯಾವುದೇ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಲ್ಲ. ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಮಾತಾಡಿದ ನಟಿ ಊರ್ವಶಿ ತಮ್ಮ 23ರ ಹರೆಯದ ಮಗಳು ಸಿನಿಮಾ ಜಗತ್ತಿಗೆ ಕಾಲಿಡಲಿದ್ದಾರೆ ಎಂದು ಹೇಳಿದ್ದರು.
ಚಿತ್ರದಲ್ಲಿ ನಟಿಸಲು ಮಗಳು ಕಥೆ ಕೇಳುತ್ತಿದ್ದಾಳೆ. ಒಳ್ಳೆಯ ಕಥೆಗಾಗಿ ಕಾಯ್ತಿದ್ದಾಳೆ ಎಂದು ನಟಿ ಊರ್ವಶಿ ಹೇಳಿದ್ದು, ಮಗಳು, ಮಗ ಮತ್ತು ಪತಿಯೊಂದಿಗೆ ಇರುವ ಫೋಟೋಗಳನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಊರ್ವಶಿ ಮಗಳು ತೇಜಲಕ್ಷ್ಮಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿದ್ದಾರೆ. ಸೌಂದರ್ಯದಲ್ಲಿ ಅಮ್ಮನನ್ನು ಮೀರಿಸುವಂತಿದ್ದಾಳೆ. ಊರ್ವಶಿ ಮಗಳ ಫೋಟೋ ನೋಡಿದ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.
ಸ್ಟಾರ್ ನಟ-ನಟಿಯರು ವೈಯಕ್ತಿಕ ಅನುಕೂಲಕ್ಕಾಗಿ ಕ್ಯಾರಾವ್ಯಾನ್ ಬಳಸುತ್ತಾರೆ. ಆದರೆ ಮಲಯಾಳಂನಲ್ಲಿ ಕ್ಯಾರಾವ್ಯಾನ್ ಪರಿಕಲ್ಪನೆಯನ್ನು ಕಾರ್ಯರೂಪಕ್ಕೆ ತಂದವರು ನಟಿ ಊರ್ವಶಿ. ಅದೂ 1990ರ ದಶಕದಲ್ಲಿ ಮಾಲಿವುಡ್ನಲ್ಲಿ ಕ್ಯಾರಾವ್ಯಾನ್ ಬಳಸಿದ ನಟಿ ಈಕೆ.