ಕಿಚ್ಚ ಸುದೀಪ್ ನಟನೆಯ ಮಾಣಿಕ್ಯ ಸಿನಿಮಾದಲ್ಲಿ ನಟಿಸಿದ್ದ ನಟಿ ವರಲಕ್ಷ್ಮಿ ಮದುವೆ ಸಂಭ್ರಮದಲ್ಲಿದ್ದಾರೆ. ಇನ್ನೆನ್ನೂ ಕೆಲವೇ ದಿನಗಳಲ್ಲಿ ನಟಿ ಹಸೆಮಣೆ ಏರಲಿದ್ದು ಮದುವೆಯ ಆಮಂತ್ರಣಗಳನ್ನು ನೀಡುವುದಲ್ಲಿ ವರಲಕ್ಷ್ಮಿ ಬ್ಯುಸಿಯಾಗಿದ್ದಾರೆ. ಸದ್ಯ ನಟಿ ತಮ್ಮ ಭಾವಿ ಪತಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮದುವೆಯ ಆಮಂತ್ರಣ ಪತ್ರಿಕೆಯನ್ನು ನೀಡಿದ್ದಾರೆ.
ʻʻನಮ್ಮ ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜಿ ಅವರನ್ನು ಭೇಟಿ ಮಾಡಿ ಮದುವೆಗೆ ಆಮಂತ್ರಿಸಿದೆವು. ಅವರನ್ನು ಆಹ್ವಾನಿಸಿದ್ದು ನಮ್ಮ ಭಾಗ್ಯ. ನಿಮ್ಮ ಬ್ಯುಸಿ ಶೆಡ್ಯೂಲ್ನ ಹೊರತಾಗಿಯೂ ನಮ್ಮೊಂದಿಗೆ ಸಮಯ ಕಳೆದಿದ್ದೀರಿ. ನಿಜವಾಗಿಯೂ ಗೌರವ ಇದುʼʼಎಂದು ಬರೆದುಕೊಂಡಿದ್ದಾರೆ. ಈ ಮೊದಲು ರಜನಿಕಾಂತ್, ಅವರ ಪತ್ನಿ ಲತಾ ಮತ್ತು ಮಗಳು ಐಶ್ವರ್ಯಾ ರಜನಿಕಾಂತ್ ಅವರನ್ನು ಭೇಟಿಯಾಗಿ ಮದುವೆಗೆ ಆಮಂತ್ರಿಸಿದ್ದರು.
ವರಲಕ್ಷ್ಮಿ ಶರತ್ಕುಮಾರ್ ಜತೆ ತಂದೆ ಶರತ್ಕುಮಾರ್, ತಾಯಿ ಮತ್ತು ಸಹೋದರಿ ಸೇರಿ ಇಡೀ ಕುಟುಂಬವೇ ಜೊತೆಗೆ ಇತ್ತು. ನಟಿ ವರಲಕ್ಷ್ಮಿ ಶರತ್ಕುಮಾರ್ ಮುಂಬೈ ಮೂಲದ ಉದ್ಯಮಿ ಜತೆಗೆ 38ನೇ ವಯಸ್ಸಿನಲ್ಲಿ ಎಂಗೇಜ್ ಆಗಿದ್ದರು. ಮಾರ್ಚ್ 1ರಂದು ಮುಂಬೈನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದು ಇದೀಗ ಜುಲೈ 2ರಂದು ಹಸೆಮಣೆ ಏರುತ್ತಿದ್ದಾರೆ.