ಚಿತ್ರರಂಗದಲ್ಲಿ ಒಬ್ಬರ ಹಿಂದೊಬ್ಬರಂತೆ ಡಿವೋರ್ಸ್ ಪಡೆದುಕೊಳ್ತಿದ್ದಾರೆ. ಚಂದನ್ ಶೆಟ್ಟಿ, ನಿವೇದಿತಾ ಡಿವೋರ್ಸ್ ಬಳಿಕ ಯುವ ಹಾಗೂ ಶ್ರೀದೇವಿ ಡಿವೋರ್ಸ್ ಸುದ್ದಿ ಸದ್ದು ಮಾಡಿತ್ತು. ಇದೀಗ ನಟಿ ವರ್ಷಾ ಬೊಳ್ಳಮ್ಮ ಡಿವೋರ್ಸ್ ಕುರಿತು ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ಸೌತ್ ನಟಿ ವರ್ಷಾ ಬೊಳ್ಳಮ್ಮ ಇನ್ನೂ ಸಿಂಗಲ್ ಆಗಿದ್ದಾರೆ. ಆದರೆ ಅವರು ಈಗ ಮದುವೆ ಮತ್ತು ಡಿವೋರ್ಸ್ ಕುರಿತು ನೀಡಿರುವ ಹೇಳಿಕೆ ಸಖತ್ ಸದ್ದು ಮಾಡುತ್ತಿದೆ. ದೀಪಿಕಾ ನಾರಾಯಣ್ ಭಾರದ್ವಾಜ್ ಎಂಬುವವರು ವರ್ಷಾಗೆ ಡಿವೋರ್ಸ್ ಕುರಿತು ಪ್ರಶ್ನೆ ಕೇಳಿದ್ದಾರೆ. ನಿಮ್ಮ ಪ್ರಕಾರ, ಡಿವೋರ್ಸ್ಗೆ ಕಾರಣವೇನು? ಎಂದು ಕೇಳಿದ್ದಕ್ಕೆ, ಮದುವೆಯೇ ವಿಚ್ಛೇದನಕ್ಕೆ ಪ್ರಮುಖ ಕಾರಣ ಎಂದು ನಟಿ ಹೇಳಿದ್ದಾರೆ.
ಈ ಬೆನ್ನಲ್ಲೇ, ನಟಿಗೆ ಮದುವೆ ಕುರಿತು ಆಸಕ್ತಿ ಇಲ್ಲ ಎಂದೆಲ್ಲಾ ಬಗೆ ಬಗೆಯ ಕಾಮೆಂಟ್ಗಳು ನೆಟ್ಟಿಗರಿಂದ ಹರಿದು ಬರುತ್ತಿವೆ. ಇನ್ನೂ ಕೆಲವರು ನೀವು ಮದುವೆ ಆಗಲ್ವಾ? ಎಂದು ಪ್ರಶ್ನೆ ಮಾಡಿದ್ದಾರೆ.