ಹಾಲಿವುಡ್ ಮಾದಕ ನಟಿ, ಮಾಡೆಲ್ ಕಿಮ್ ಕಾರ್ಡಶಿಯಾನ್ ರಂತೆ ಕಾಣಿಸುತ್ತಿದ್ದ ಮಾಡೆಲ್ ಕ್ರಿಸ್ಟೀನಾ ಆಸ್ಟೆನ್ ತಮ್ಮ 34ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ.
ಕ್ರಿಸ್ಟೀನಾ ಆಸ್ಟೆನ್ ಸಾವಿಗೆ ಆಕೆ ಮಾಡಿಸಿಕೊಂಡಿದ್ದ ಪ್ಲಾಸ್ಟಿಕ್ ಸರ್ಜರಿಯೇ ಕಾರಣ ಎಂದು ಹೇಳಲಾಗುತ್ತಿದೆ. ಈಕೆ ಮಾಡೆಲ್ ಕಿಮ್ ರೀತಿಯಲ್ಲಿ ಕಾಣುವುದಕ್ಕಾಗಿ ಪ್ಲಾಸ್ಟಿಕ್ ಸರ್ಜರಿಗೆ ಮೊರೆ ಹೋಗಿದ್ದರು ಎಂದು ಹೇಳಲಾಗುತ್ತಿದೆ.
ಹಾಲಿವುಡ್ ನ ಖ್ಯಾತ ಮಾಡೆಲ್ ಕಿಮ್ ಕಾರ್ಡಶಿಯಾನ್ ಜೊತೆ ಹಲವಾರು ವೇದಿಕೆಗಳನ್ನು ಹಂಚಿಕೊಂಡಿದ್ದ ಕ್ರಿಸ್ಟೀನಾ ಥೇಟ್ ಕಿಮ್ ಹಾಗೆಯೇ ಕಾಣಿಸಿಕೊಳ್ಳಬೇಕು ಅನ್ನುವ ಬಯಕೆ ಇತ್ತಂತೆ. ಹಲವರು ಇವರನ್ನು ಜ್ಯೂನಿಯರ್ ಕಿಮ್ ಅಂತಾನೂ ಕರೆಯುತ್ತಿದ್ದರಂತೆ. ಈ ಆಸೆಯೇ ಅವರನ್ನು ಬಲಿ ತಗೆದುಕೊಂಡಿದೆ ಎನ್ನಲಾಗುತ್ತಿದೆ.
ಕಿಮ್ ಹಾಲಿವುಡ್ ನಲ್ಲಿ ಮಾದಕ ನಟಿ ಹಾಗೂ ಮಾಡೆಲ್ ಎಂದೇ ಫೇಮಸ್. ಹಾಟ್ ಹಾಟ್ ವಿಡಿಯೋ ಮತ್ತು ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಲಕ್ಷಾಂತರ ರೂಪಾಯಿ ಸಂಪಾದಿಸುತ್ತಾರೆ. ಕಿಮ್ ಗೆ ಕೋಟ್ಯಂತರ ಅಭಿಮಾನಿಗಳು ಕೂಡ ಇದ್ದಾರೆ. ಕ್ರಿಸ್ಟೀನಾ ಕೂಡ ಕಿಮ್ ನಂತೆಯೇ ಅದೆಲ್ಲವನ್ನೂ ಬಯಸಿದ್ದು ಆಕೆಯಂತೆ ಕಾಣಲು ಸಾಕಷ್ಟು ಪ್ಲ್ಯಾಸ್ಟಿಕ್ ಸರ್ಜರಿ ಮೊರೆ ಹೋಗಿದ್ದರು ಎಂದು ಹೇಳಲಾಗುತ್ತಿದೆ.
ಮೃತ ಕ್ರಿಸ್ಟೀನಾ ಅಂತ್ಯಕ್ರಿಯೆ ಮಾಡಲು ಸಹ ಹಣವಿಲ್ಲ ಎಂದು ಸೋಷಿಯಲ್ ಮೀಡಿಯಾ ಮೂಲಕ ಫಂಡ್ ಸಂಗ್ರಹಿಸಲು ಅವರು ಕುಟುಂಬಸ್ಥರು ಮುಂದಾಗಿದ್ದಾರೆ ಎಂದು ವರದಿ ಆಗಿದೆ.