ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ದಿನೇ ದಿನೇ ತೀವ್ರವಾಗಿ ನೀರಿನ ಬಿಕ್ಕಟ್ಟು ಪಡೆದಿದ್ದು ಎಲ್ಲಾ ಏರಿಯಾಗಳಲ್ಲಿ ಕಷ್ಟಪಡುತ್ತಿದ್ದಾರೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇಂದಿನಿಂದ ಬಹುತೇಕ ಕಡೆ ಕಾರ್ಯಾರಂಭ ನಗರದ ಕಟ್ಟಡಗಳು, ವಾಣಿಜ್ಯ ಸಂಸ್ಥೆಗಳು, ರೆಸ್ಟೊರೆಂಟ್ಗಳು, ಐಷಾರಾಮಿ ಹೋಟೆಲ್ಗಳು, ಕೈಗಾರಿಕೆಗಳು ಮತ್ತು ಇತರ ಸಾರ್ವಜನಿಕ ಪ್ರದೇಶಗಳಲ್ಲಿ ಏರಿಯೇಟರ್ ಅಳವಡಿಕೆ ಕಡ್ಡಾಯಗೊಳಿಸಿದೆ.
ಯಾಕಾಗಿ ಏರಿಯೇಟರ್ ಅಳವಡಿಕೆ?
ಏರಿಯೇಟರ್ ಎನ್ನುವುದು ನಲ್ಲಿಗೆ ಅಳವಡಿಸುವ ಸಾಧನವಾಗಿದೆ. ಇದು ನೀರಿನ ಹರಿವನ್ನು ನಿಯಂತ್ರಿಸುತ್ತದೆ. ಅಳವಡಿಸುವ ಮೂಲಕ ನೀರಿನ ಹರಿವು ನಿಯಂತ್ರಣದ ಜತೆಗೆ ಬಳಕೆಯನ್ನೂ ಕಡಿಮೆ ಮಾಡಬಹುದಾಗಿದೆ.ಅಧಿಕಾರಿಗಳು ಇಂದಿನಿಂದ ಕಟ್ಟಡಗಳಲ್ಲಿ ಏರಿಯೇಟರ್ಗಳನ್ನು ಸ್ಥಾಪಿಸಲು ಪ್ರಾರಂಭಿಸುತ್ತಿದ್ದಾರೆಏರಿಯೇಟರ್ ಅಳವಡಿಕೆಯಿಂದ ಶೇ 60 ರಿಂದ 85 ರಷ್ಟು ನೀರನ್ನು ಉಳಿಸಬಹುದು
ಮಾರ್ಚ್ 21 ರಿಂದ 31 ರವರೆಗೆ ಸ್ವಯಂ ಇಚ್ಛೆಯಿಂದ ಏರಿಯೇಟರ್ ಅಳವಡಿಕೆಗೆ ಅವಕಾಶ ಇದನ್ನು ಬಳಕೆ ಮಾಡುವುದು ಹೇಗೆ ಅಪಾರ್ಟ್ಮೆಂಟ್ ನಿವಾಸಿಯೊಬ್ಬರು ಇದರ ಬಗ್ಗೆ ವಿವರಣೆ ನೀಡಿದ್ದಾರೆ