ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಕೇಸ್ ನ ಆರೋಪಿ ದರ್ಶನ್ ಗೆ ಪೋಲಿಸರು ಮತ್ತಷ್ಟು ಶಾಕ್ ಕೊಟ್ಟಿದ್ದಾರೆ. ಆಸ್ಪತ್ರೆಯಲ್ಲಿರುವ ದರ್ಶನ್ ಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಪ್ರಕರಣ ಸಂಬಂಧ ಹೆಚ್ಚುವರಿ ಚಾರ್ಜ್ ಶೀಟ್ ಗೆ ಸಲ್ಲಿಕೆ ಮಾಡಿದ್ದು ಈ ಮೂಲಕ ಮಧ್ಯಂತರ ಜಾಮೀನಿಗೂ ಕಂಟಕ ತರೋ ಸಾಧ್ಯತೆಯಿದೆ.ಆಸ್ಪತ್ರೆಯಲ್ಲಿರೋ ಆರೋಪಿ ದರ್ಶನ್ ಮತ್ತೆ ಢವ ಢವ ಶುರುವಾಗಿದೆ..
ಹೌದು, ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ತನಿಖೆ ಪೂರ್ಣಗೊಳಿಸಿರೋ ಪೊಲೀಸ್ರು ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಸಿಸಿಹೆಚ್ 57 ನೇ ನ್ಯಾಯಾಲಯಕ್ಕೆ 1300 ಪುಟಗಳ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಕೊಲೆ ಕೇಸ್ ನಲ್ಲಿ ಮತ್ತೆ 20 ಕ್ಕೂ ಸಾಕ್ಷಿಗಳ ಉಲ್ಲೇಖ ಮಾಡಿರೋ ಪೊಲೀಸ್ರು, ಪ್ರಬಲ ಸಾಕ್ಷ್ಯಗಳ ಹೇಳಿಕೆ ದಾಖಲಿಸಿದ್ದಾರಂತೆ..
ಇದ್ರಲ್ಲಿ ಮತ್ತೆ ದರ್ಶನ್ ಪವಿತ್ರಾಗೌಡ ಮೊಬೈಲ್ ರಿಟ್ರೀವ್ ವರದಿಗಳ ಬಗ್ಗೆ ಉಲ್ಲೇಖವಿದೆ…ಜೊತೆಗೆ ಸಾಕಷ್ಟು ಎಫ್ ಎಸ್ ಎಲ್ ವರದಿಗಳು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದ್ದಾರೆ.ಇನ್ನುಕೊಲೆ ನಡೆದ ಜಾಗದಲ್ಲಿ ದರ್ಶನ್ ಪೋಟೊ ರಹಸ್ಯ ಬೆಳಕಿಗೆ ಬಂದಿದೆ..ಸಾಕ್ಷಿದಾರನಾಗಿರುವ ಪುನೀತ್ ಮೊಬೈಲ್ ನಲ್ಲಿ ಡಿಲೀಟ್ ಆಗಿದ್ದ ಪೋಟೊಗಳು ಪತ್ತೆಯಾಗಿದೆ ಎಂದು ಉಲ್ಲೇಖಿಸಲಾಗಿದೆ..
ನ್ನು ದರ್ಶನ್ ಗೆ ಮೆಡಿಕಲ್ ವರದಿ ಕಂಟಕವಾಗುತ್ತಾ ಎಂಬ ಪ್ರಶ್ನೆ ಮೂಡಿದೆ..ಈ ಬಗ್ಗೆ ಆರೋಪಿ ದರ್ಶನ್ ಗೆ ಮೆಡಿಕಲ್ ರಿಪೋರ್ಟ್ ಟೆನ್ಶನ್ ಶುರುವಾಗಿದ್ಯಂತೆ..ಕೋರ್ಟ್ ಅಂಗಳ ಸೇರಿರುವ ವರದಿಯ ಬಗ್ಗೆ ಎಸ್ ಪಿ ಪಿ ವಾದದ ಬಗ್ಗೆ ತಲೆಬಿಸಿಯಾಗಿದೆ..ಇದನ್ನ ಕೋರ್ಟ್ ಯಾವ ರೀತಿ ಪರಿಗಣಿಸುತ್ತೆ..ಮಧ್ಯಂತರ ಜಾಮೀನು ಸೇಫಾ…? ಇಲ್ಲ ಕಂಟಕವಾ..? ಎಂಬುವ ಲೆಕ್ಕಾಚಾರದಲ್ಲಿ ಕುಟುಂಬಸ್ಥರು ಇದ್ದಾರೆ..ಅಲ್ದೆ ಆಸ್ಪತ್ರೆಯಲ್ಲಿ ಇರೋ ದರ್ಶನ್ ಗೆ ಇನ್ನೂ ಶಸ್ತ್ರಚಿಕಿತ್ಸೆ ದಿನಾಂಕ ನಿಗದಿ ಆಗಿಲ್ಲ..ಶಸ್ತ್ರಚಿಕಿತ್ಸೆಗೆ ನಾವು ತಯಾರಿಯನ್ನು ನಡೆಸುತ್ತಾ ಇದ್ದೇವೆಂದು ಉಲ್ಲೇಖವಾಗಿದೆ..He is being prepared for surgery ಎಂಬುದು ಉಲ್ಲೇಖವಿದ್ಯಂತೆ..
ಆರು ವಾರಗಳ ನಂತರ ಮತ್ತೆ ಏನು ಮಾಡಬೇಕೆಂದು ಕುಟುಂಬಸ್ಥರು ಈಗಾಗಲೇ ಪ್ಲಾನ್ ಮಾಡಿದ್ದು ಏನಾಗುತ್ತೋ ಅನ್ನೊ ಯೋಚನೆಯಲ್ಲಿ ದರ್ಶನ್ ಕಾಲ ಕಳೆಯುತ್ತಿದ್ದಾನೆ.
ಸದ್ಯ ಇದೇ ತಿಂಗಳ 26 ಕ್ಕೆ ಹೈಕೋರ್ಟ್ ನಲ್ಲಿ ಜಾಮೀನು ಅರ್ಜಿ ವಿಚಾರಣೆ ನಿಗದಿಯಾಗಿದೆ. ರೆಗ್ಯೂಲರ್ ಬೇಲ್ ಸಿಗುತ್ತಾ.? ಇಲ್ಲ ಆರುವಾರಗಳ ಬಳಿಕ ಬಳ್ಳಾರಿ ಜೈಲಿಗೆ ಹೋಗ್ತಾರ ಕಾದು ನೋಡಬೇಕು.