“ಬಾಲಿವುಡ್ ನನ್ನ ಕರ್ಮಭೂಮಿ, ಮುಂಬೈ ನನ್ನ ಜನ್ಮಭೂಮಿ. ಅಂತೆಯೇ ದುಬೈನಲ್ಲಿಯೂ ನಾನು ಏನಾದರೊಂದು ಮಾಡಬೇಕು. ಬಾಲಿವುಡ್, ಹಾಲಿವುಡ್ ರೀತಿ ದುಬೈನಲ್ಲಿ ದಾಲಿವುಡ್ ಮಾಡಬೇಕು. ಭಾರತದಲ್ಲಿರುವ ಪತ್ರಕರ್ತರು, ಪಾಪರಾಜಿಗಳ ರೀತಿ ದುಬೈನಲ್ಲಿ ಕೂಡ ಪತ್ರಕರ್ತರು, ಪಾಪರಾಜಿ ಇರಬೇಕು, ಅದಕ್ಕೆ ಏನು ಬೇಕೋ ಅದನ್ನು ನಾನು ನೀಡುತ್ತೇನೆ” ಎಂದು ರಾಖಿ ಸಾವಂತ್ ಹೇಳಿದ್ದಾರೆ.
“ನಾನು ತುಂಬ ಸ್ಟ್ರಾಂಗ್. ನನ್ನನ್ನು ನಾನು ಮುಗಿಸಿಕೊಂಡಿದ್ದೆ, ಆದರೆ ಎಲ್ಲ ಅಭಿಮಾನಿಗಳಿಂದ ಗಟ್ಟಿಯಾಗಿದ್ದೇನೆ. ಮೈಸೂರಿನ ಜೈಲಿನಲ್ಲಿದ್ದುಕೊಂಡು ಆದಿಲ್ ನನಗೆ ಮೆಸೇಜ್ ಮಾಡಿ ಒಂದು ಅವಕಾಶ ಕೊಡು ಅಂತ ಕೇಳುತ್ತಿದ್ದೇನೆ. ನಾನು ಅವನಿಗೆ ಕಾಲಿಗೆ ಬಿದ್ದು ಮನೆಗೆ ಬಾ, ಬೇರೆದೆಲ್ಲ ಬಿಡು ಅಂತ ಹೇಳಿದ್ದರೂ ಕೇಳಿಲ್ಲ. ಆದಿಲ್ ಖುರಾನ್ನ ಮೇಲೆ ಆಣೆ ಮಾಡಿ ಸರಿಯಾಗಿ ಇರ್ತೀನಿ ಅಂತ ಹೇಳಬೇಕು , ಕೋರ್ಟ್ನಲ್ಲಿ ನಾನು ರಾಖಿಯನ್ನು ಚೆನ್ನಾಗಿ ನೋಡಿಕೊಳ್ತೀನಿ, ಮದುವೆಯನ್ನು ನಿಭಾಯಿಸಿಕೊಂಡು ಹೋಗುವೆ ಅಂತ ಬರೆದುಕೊಡಬೇಕು, ಆದರೆ ಅವನು ನನ್ನ ತಾಯಿಯನ್ನು ವಾಪಾಸ್ ತರುತ್ತಾನಾ? ಸಾಧ್ಯವೇ ಇಲ್ಲ. ಹಾಗಾಗಿ ನಾನು ಆದಿಲ್ನನ್ನು ಕ್ಷಮಿಸೋದಿಲ್ಲ” ಎಂದು ರಾಖಿ ಸಾವಂತ್ ಹೇಳಿದ್ದಾರೆ.
“ಆದಿಲ್ ಮತ್ತೆ ನನ್ನ ಜೀವನದಲ್ಲಿ ಬರೋಕೆ ಇಷ್ಟಪಡ್ತಿದ್ದಾನೆ. ಅವನು ವಾಪಾಸ್ ಬರೋದು ನನ್ನನ್ನು ಕೊಲ್ಲೋದಿಕ್ಕಾ? ನನ್ನ ಜೀವನ ಹಾಳು ಮಾಡಿದ ಹಾಗೆ ಅವನು ಇನ್ನೊಂದು ಹುಡುಗಿ ಜೀವನ ಹಾಳು ಮಾಡಬಾರದು ಅಂತ ನಾನು ಆದಿಲ್ಗೆ ವಿಚ್ಛೇದನ ಕೊಡೋದಿಲ್ಲ. ಜೀವನದಲ್ಲಿ ನಾನು ಇನ್ಮುಂದೆ ಮದುವೆ ಆಗೋದಿಲ್ಲ, ಮಕ್ಕಳ ಬಗ್ಗೆಯೂ ಯೋಚನೆ ಮಾಡೋದಿಲ್ಲ. ನನ್ನ ಅಕಾಡೆಮಿಯ ಮಕ್ಕಳು ನನ್ನ ಮಕ್ಕಳು” ಎಂದು ರಾಖಿ ಸಾವಂತ್ ನೋವು ತೋಡಿಕೊಂಡಿದ್ದಾರೆ.
“ನಾನು ಈಗಾಗಲೇ ಸತ್ತುಹೋಗಿದ್ದೇನೆ, ಹೃದಯವೂ ಸತ್ತು ಹೋಗಿದೆ. ಆದರೆ ಉಸಿರಾಡುತ್ತಿದ್ದೇನೆ ಅಷ್ಟೇ. ಎಲ್ಲ ಕೆಲಸ ನಿಭಾಯಿಸುವ ಮಹಿಳೆಯವರಿಗೆ ನೋವು ಕೊಡಬೇಡಿ, ಹೊಡೆಯಬೇಡಿ” ಎಂದು ರಾಖಿ ಸಾವಂತ್ ಹೇಳಿದ್ದಾರೆ.