ಅಡಲ್ಟ್ ಸಿನಿಮಾಗಳ ನಟಿ ಸೋಫಿಯಾ ಲಿಯೋನಿ ಅವರ ಶವ ಅಪಾರ್ಟ್ ಮೆಂಟ್ ನಲ್ಲಿ ಪತ್ತೆಯಾಗಿದೆ. ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಅಥವಾ ಆಕಸ್ಮಿಕ ಸಾವೋ ಎನ್ನುವುದು ತನಿಖೆಯಿಂದ ದೃಡಪಟ್ಟಿದೆ.
26 ವಯಸ್ಸಿನ ಸೋಫಿಯಾ ಲಿಯೋನಿ ಇತ್ತೀಚೆಗೆ ಮನೆಯವರ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಕುಟುಂಬದವರಿಗೆ ಅನುಮಾನ ಬಂದಿದೆ. ಆ ಬಳಿಕ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮನೆಯ ಬಾಗಿಲು ತೆಗೆದು ನೋಡಿದಾಗ ಸೋಫಿಯಾ ಶವ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸೋಫಿಯಾ ಮಲತಂದೆ ಮೈಕ್ ರೋಮೆರೋ ಈ ವಿಚಾರವನ್ನು ಖಚಿತಪಡಿಸಿದ್ದಾರೆ. ಸೋಫಿಯಾ ತಾಯಿ ಹಾಗೂ ಕುಟುಂಬದ ಪರವಾಗಿ ಈ ವಿಚಾರವನ್ನು ತಿಳಿಸುತ್ತಿದ್ದೇನೆ. ಸೋಫಿಯಾ ಇನ್ನಿಲ್ಲ ಎನ್ನುವ ವಿಚಾರವನ್ನು ನಾನು ಹೇಳುತ್ತಿದ್ದೇನೆ. ಈ ಘಟನೆ ನಮ್ಮ ಕುಟುಂಬ ಹಾಗೂ ಗೆಳೆಯರಿಗೆ ಶಾಕ್ ನೀಡಿದೆ. ಸೋಫಿಯಾ ಅವರ ಅಂತ್ಯ ಸಂಸ್ಕಾರಕ್ಕೆ ಹಣ ಕಳುಹಿಸುವಂತೆ ಹಾಗೂ ಈ ಸಂಬಂಧ ತನಿಖೆ ನಡೆಸುವಂತೆ ಮೈಕ್ ಮನವಿ ಮಾಡಿದ್ದು ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
‘ಸೋಫಿಯಾ ಅವರು ಸದಾ ಪ್ರಯಾಣ ಮಾಡಲು ಇಷ್ಟಪಡುತ್ತಿದ್ದರು. ಅವರು ಎಲ್ಲರ ಮುಖದಲ್ಲೂ ನಗು ತರಿಸುತ್ತಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಮೈಕ್ ಅವರು ಹೇಳಿದ್ದಾರೆ. ಕಳೆದ ಫೆಬ್ರವರಿ ತಿಂಗಳಲ್ಲಿ ಅಡಲ್ಟ್ ಫಿಲ್ಮ್ ಸ್ಟಾರ್ ಕ್ಯಾಗ್ನಿ ಲಿನ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬೆನ್ನಲ್ಲೇ ಸೋಫಿಯಾ ಕೂಡ ಮೃತಪಟ್ಟಿರುವುದು ಶಾಕ್ ನೀಡಿದೆ.