ಗದಗ: ಎಲ್.ಕೆ ಅಡ್ವಾಣಿಗೆ ಭಾರತ ರತ್ನ ಪ್ರಶಸ್ತಿ ನೀಡಿದ್ದು ಸಂತೋಷ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು. ನಗರದ ಹೊಸ ಬಸ್ ನಿಲ್ದಾಣದಲ್ಲಿ ನೂತನ 50 ಬಸ್ಗಳ ಉದ್ಘಾಟನೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷ ಈ ಮಟ್ಟಕ್ಕೆ ಬೆಳೆಯಲು ಅಡ್ವಾಣಿ ಸಹ ಕಾರಣ. ಅವರನ್ನು ಮೂಲೆಗುಂಪು ಮಾಡಿದ್ದರು. ಈಗಲಾದರೂ ಬಿಜೆಪಿಯವರಿಗೆ ಬುದ್ಧಿ ಬಂದು ಅವರಿಗೆ ಭಾರತ ರತ್ನ ಘೋಷಣೆ ಮಾಡಿದ್ದು ಸಂತೋಷ ಎಂದರು.
ಪ್ರಹ್ಲಾದ್ ಜೋಷಿ ಹಾಗೂ ಸಂತೋಷ್ ಅವರು ಸೇರಿ ಯಡಿಯೂರಪ್ಪಗೆ ಏನು ಮಾಡಿದ್ರು? ಯಡಿಯೂರಪ್ಪ ಅವರನ್ನು ಕೆಳಗೆ ಇಳಿಸಿದವರು ಯಾರು? ಇವರೆ ತಾನೇ ಇಳಿಸಿದ್ದು? ವಿಜಯೇಂದ್ರ ಏನು ಆಗಬಾರದು ಎಂದು ಮೊನ್ನೆಯೂ ಏನೋ ಪ್ರಯತ್ನ ಮಾಡಿದರು. ಆದರೂ ಏನು ನಡಿಯಲಿಲ್ಲ. ಚುನಾವಣೆ ಬಂತಲ್ವಾ, ಅದಕ್ಕೆ ಯಡಿಯೂರಪ್ಪ ಮುಖ ನೋಡಿ ಮತ ಹಾಕುತ್ತಾರೆ ಎಂದು ಸುಮ್ಮನಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.