ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ ಆರೋಪದ ಆರೋಪದಲ್ಲಿ ನಟ ದರ್ಶನ್ ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ದರ್ಶನ್ ಪರವಾಗಿ ವಾದ ಮಾಡುತ್ತಿರುವ ವಕೀಲರು ತಮ್ಮ ಕಕ್ಷಿದಾರ ಅಪರಾಧ ಮಾಡಿಲ್ಲ ಎಂದು ಸಾಕಷ್ಟು ಭಾರಿ ಹೇಳಿದ್ದಾರೆ. ಇದೀಗ ಈ ಬಗ್ಗೆ ಆಕ್ರೋಶ ಹೊರ ಹಾಕಿರುವ ಬಾರ್ ಕೌನ್ಸಿಲ್ ಮಾಜಿ ಉಪಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಅವರು ದರ್ಶನ್ ಪರ ವಕೀಲರು ಲಾಯರ್ ಆಗಲು ಅನ್ಫಿಟ್ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದರ್ಶನ್ ಪರ ವಕೀಲರಿಗೆ ನಿನ್ನ ಕಕ್ಷಿದಾರರನ್ನ ಕೋರ್ಟಿನಲ್ಲಿ ಡಿಫೆಂಡ್ ಮಾಡ್ಕೋ… ಪಬ್ಲಿಕ್ ನಲ್ಲಿ ಅಲ್ಲ. ದರ್ಶನ್ ಪರ ವಕೀಲರು ಮಾಧ್ಯಮಗಳ ಮುಂದೆ ಮಾತನಾಡುವಾಗ ಅವರು ಅಪರಾಧ ಮಾಡಿಲ್ಲ ಅಂತ 100 ಸಲ ಹೇಳ್ತಾನೆ. ಆತ ಲಾಯರ್ ಆಗಲು ಅನ್ ಫಿಟ್. ಬಾರ್ ಕೌನ್ಸಿಲ್ನಿಂದ ಅವನಿಗೆ ನೋಟೀಸ್ ಕೊಡುಸ್ತೀನಿ. ಅವರು ತಪ್ಪು ಮಾಡಿಲ್ಲ, ಪೊಲೀಸರ ತನಿಖೆ ಸರಿ ಇಲ್ಲ ಅಂತ ಬೀದಿಯಲ್ಲಿ ಹೇಳ್ತಾರಾ? ಬೀದಿಯಲ್ಲಿ ಮಾತನಾಡಲು ನಿನಗೆ ಪ್ರತಿಜ್ಞೆ ಕೊಟ್ಟಿದ್ದಾರಾ.? ಎಂದು ಪ್ರಶ್ನೆ ಮಾಡಿದರು.
ನಿಮ್ಮ ಕಕ್ಷಿದಾರರು ತಪ್ಪು ಮಾಡಿಲ್ಲ ಅನ್ನೋದನ್ನ ಕೋರ್ಟಿನಲ್ಲಿ ಪ್ರೂವ್ ಮಾಡು. ಅದಕ್ಕೆ ಕರಿ ಕೋಟು ಹಾಕಿರೋದು, ಲಾಯರ್ ಆಗಿ ಕರಿಕೋಟಿನ ಬೆಲೆ ಕಳೆಯಬಾರದು. ಅಪರಾಧ ಮಾಡಿಲ್ಲ ಅಂತ ಅಪರಾಧಿ ಹೇಳಿದ ರೀತಿ ಲಾಯರ್ ಹೇಳ್ತಾನೆ. ನಿನ್ನ ಕೆಲಸ ಕೋರ್ಟ್ ಒಳಗೆ ಇರಬೇಕೇ ಹೊರತು, ಸಾರ್ವಜನಿಕ ಪ್ರದೇಶದಲ್ಲಿ ಅಲ್ಲ. ನಿನ್ನ ಕಕ್ಷಿದಾರನ ಡಿಫೆಂಡ್ ಮಾಡು, ಎಲ್ಲರೂ ಅದಕ್ಕೆ ಕರೀ ಕೋಟು ಹಾಕಿರೋದು. ಗಾಂಧೀಜಯನ್ನು ಕೊಂದ ನಾಥೂರಾಮ್ ಗೋಡ್ಸೆ ಹಾಗೂ ಇಂದಿರಾಗಾಂಧಿ, ರಾಜೀವ್ ಗಾಂಧಿ ಕೊಂದವರಿಗೂ ಲಾಯರಿದ್ದರು. ಅವರು ಯಾರೂ ಕೂಡ ತಮ್ಮ ಕಕ್ಷಿದಾರರು ತಪ್ಪು ಮಾಡಿಲ್ಲ ಅಂತ ಹೇಳಿಲ್ಲ. ಆದರೆ ನೀನಿ ಹೇಗೆ ಸಾರ್ವಜನಿಕವಾಗಿ ತಪ್ಪು ಮಾಡಿಲ್ಲವೆಂದು ಹೇಳುತ್ತೀಯ ಎಂದು ಕಿಡಿಕಾರಿದರು.
ನಿನ್ನ ಕಕ್ಷಿದಾರ ತಪ್ಪು ಮಾಡಿಲ್ಲ ಎಂದಾದರೆ ಸಾಕ್ಷಿ ಸಮೇತ ಕೋರ್ಟಿನಲ್ಲಿ ಪ್ರೂವ್ ಮಾಡು, ಹೊರಗಡೆ ಕೂಗಾಡೋದಲ್ಲ. ನೀನು ನಿಜವಾಗಿಯೂ ಲಾಯರ್ ಆಗಲು ಅನ್ಫಿಟ್ ಇದ್ದೀಯ. ಕರೀ ಕೋಟಿಗೆ ಅದರದ್ದೇ ಆದ ಪಾವಿತ್ರ್ಯವಿದೆ, ಅದರ ಮರ್ಯಾದೆ ತೆಗೆಯಬಾರದು. ಒಮ್ಮೆ ಪ್ರತಿಜ್ಞಾವಿಧಿ ಸ್ವೀಕರಿಸದ ಮೇಲೆ ಅದರ ಗೌರವ ಕಾಪಾಡಬೇಕು ಎಂದು ಎಂಎಲ್ಸಿ ಭೋಜೇಗೌಡ ಕಿಡಿ ಕಾರಿದರು.