ಕಾಬೂಲ್: ಅಫ್ಘಾನಿಸ್ತಾನದಲ್ಲಿ ಮತ್ತೆ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 4.1ರಷ್ಟು ದಾಖಲಾಗಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಪ್ರಕಾರ ಗುರುವಾರ ಅಫ್ಘಾನಿಸ್ತಾನದಲ್ಲಿ 4.1 ತೀವ್ರತೆಯ ಭೂಕಂಪ ಸಂಭವಿಸಿದ್ದು, ಈ ಬಗ್ಗೆ NCS ಟ್ವೀಟ್ ಮೂಲಕ ತಿಳಿಸಿದೆ.
ಮಧ್ಯಾಹ್ನ 02:35:57 IST ಕ್ಕೆ ಅಫ್ಘಾನಿಸ್ತಾನದ ಫೈಜಾಬಾದ್ನಿಂದ ಪೂರ್ವ ಈಶಾನ್ಯಕ್ಕೆ 267 ಕಿಮೀ ದೂರದಲ್ಲಿ 4.1 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪವು 10 ಕಿಲೋಮೀಟರ್ ಆಳದಲ್ಲಿ, 36.38 ಅಕ್ಷಾಂಶ ಮತ್ತು 70.94 ರೇಖಾಂಶದಲ್ಲಿ ಸಂಭವಿಸಿದೆ.
ಇನ್ನು ಫೆ.27 ಸಹ ಅಫ್ಘಾನಿಸ್ತಾನದಲ್ಲಿ ಭೂಕಂಪ ಆಗಿತ್ತು. ಬಳಿಕ ಮಂಗಳವಾರವೂ ಎರಡನೇ ಬಾರಿ ಭೂಕಂಪ ಸಂಭವಿಸಿತ್ತು. ಇದೀಗ ಮತ್ತೆ ಇಂದು 4.1 ತೀವ್ರತೆಯ ಭೂಕಂಪ ಸಂಭವಿಸಿದೆ. ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ.