ಪಶ್ಚಿಮ ಅಫ್ಘಾನಿಸ್ತಾನದ ಶಿಯಾ ಮಸೀದಿಯಲ್ಲಿ ಬಂದೂಕುಧಾರಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ 6 ಮಂದಿ ಮೃತಪಟ್ಟಿರುವ ಕುರಿತು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಹೆರಾತ್ ಪ್ರಾಂತದ ಗುಝಾರಾ ಜಿಲ್ಲೆಯ ಮಸೀದಿಯಲ್ಲಿ ಗುಂಡಿನ ದಾಳಿ ನಡೆದಿದೆ. ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದ 6 ಮಂದಿ ಸಾವನ್ನಪ್ಪಿದ್ದು ಓರ್ವ ಗಾಯಗೊಂಡಿದ್ದಾನೆ. ದಾಳಿ ನಡೆಸಿದ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದು ತನಿಖೆ ಮುಂದುವರಿದಿದೆ. ಘಟನೆಯ ಕುರಿತು ಯಾವುದೇ ಸಂಘಟನೆ ಹೊಣೆಹೊತ್ತುಕೊಂಡಿಲ್ಲ ಎಂದು ಅಫ್ಘಾನಿಸ್ತಾನದ ಆಂತರಿಕ ಸಚಿವಾಲಯದ ವಕ್ತಾರ ಅಬ್ದುಲ್ ಮತೀನ್ ಖಾನಿ ತಿಳಿಸಿದ್ದಾರೆ.
ಶಿಯಾ ಮುಸ್ಲಿಮರ ಪ್ರಾರ್ಥನಾ ಮಂದಿರವನ್ನು ಗುರಿಯಾಗಿಸಿ ನಡೆದಿರುವ ದಾಳಿಯನ್ನು ಖಂಡಿಸುವುದಾಗಿ ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಹಮೀದ್ ಕರ್ಝಾಯಿ ಟ್ವೀಟ್(ಎಕ್ಸ್) ನಲ್ಲಿ ತಿಳಿಸಿದ್ದಾರೆ.