ಗಾಂಧಿನಗರ: ಮದುವೆಯಾಗಿ 8 ವರ್ಷ ಕಳೆದ ನಂತರ ತನ್ನ ಪತಿ (Husband) ಮೊದಲು ಮಹಿಳೆಯಾಗಿದ್ದಳು ಎಂಬ ಸತ್ಯ ತಿಳಿದುಬಂದಿದ್ದು, ಗುಜರಾತ್ನ ವಡೋದರಾದಲ್ಲಿ (Gujarat Vadodara) ಮಹಿಳೆಯೊಬ್ಬರು ಶಾಕ್ ಆಗಿದ್ದಾಳೆ. 40 ವರ್ಷದ ಮಹಿಳೆಯೊಬ್ಬರು 2014ರಲ್ಲಿ ಮದುವೆಯಾದ ವ್ಯಕ್ತಿ ಪುರುಷನಾಗಲು ಲಿಂಗ ಬದಲಾವಣೆಯ ಶಸ್ತ್ರಚಿಕಿತ್ಸೆಗೆ(Sex Change Operation) ಒಳಗಾಗಿದ್ದು, ಈ ವಿಚಾರವನ್ನು ತನ್ನಿಂದ ಮುಚ್ಚಿಟ್ಟಿರುವುದು ತಿಳಿದು ಕಂಗಲಾಗಿದ್ದಾಳೆ.
ಈ ಸಂಬಂಧ ಮಹಿಳೆ ಬುಧವಾರ ಗೋತ್ರಿ ಪೊಲೀಸ್ನಲ್ಲಿ(Gotri Police) ದೂರು ದಾಖಲಿಸಿದ್ದು, ತನ್ನ ಪತಿ ವಿರಾಜ್ ವರ್ಧನ್ ವಂಚನೆ ಮತ್ತು ಅಸ್ವಾಭಾವಿಕ ಲೈಂಗಿಕತೆಗೆ ನಡೆಸಿರುವುದಾಗಿ ಆರೋಪಿಸಿದ್ದಾರೆ. ಎಫ್ಐಆರ್ನಲ್ಲಿ ಅವರ ಕುಟುಂಬಸ್ಥರ ಹೆಸರನ್ನು ಉಲ್ಲೇಖಿಸಿದ್ದಾಳೆ. ಹಿಂದೆ ವಿಜೈತಾ(Vijaita) ಎಂದು ಗುರುತಿಸಿಕೊಂಡಿದ್ದ ವಿರಾಜ್ ವರ್ಧನ್ (Viraj Vardhan) ಅವರನ್ನು ಒಂಬತ್ತು ವರ್ಷಗಳ ಹಿಂದೆ ಮ್ಯಾಟ್ರಿಮೋನಿಯಲ್ ಸೈಟ್ ಮೂಲಕ ಭೇಟಿಯಾಗಿದ್ದೆ. ನನ್ನ ಮೊದಲ ಪತಿ 2011ರಲ್ಲಿ ರಸ್ತೆ ಅಪಘಾತದಲ್ಲಿ (Road Accident) ನಿಧನರಾದರು ಮತ್ತು ನಮಗೆ 14 ವರ್ಷದ ಮಗಳಿದ್ದಳು (Daughter) ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾಳೆ.
ಫೆಬ್ರವರಿ (February) 2014 ರಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ವಿರಾಜ್ ವರ್ಧನ್ ಮಹಿಳೆ ಮದುವೆಯಾಗಿದ್ದು, ನಂತರ ಹನಿಮೂನ್ಗಾಗಿ ಕಾಶ್ಮೀರಕ್ಕೆ(Kashmir) ತೆರಳಿದ್ದರು. ಆದರೆ ವ್ಯಕ್ತಿ ಈ ವೇಳೆ ವಿಚಿತ್ರವಾಗಿ ವರ್ತಿಸುತ್ತಿದ್ದರು. ಸದಾ ಮುನಿಸಿಕೊಳ್ಳುವ ಮೂಲಕ ನನ್ನಿಂದ ದೂರ ಉಳಿದಿದ್ದರು. ನಂತರ ಮಹಿಳೆ ಆತನ ಮೇಲೆ ಒತ್ತಡ ಹೇರಿದಾಗ, ಕೆಲವು ವರ್ಷಗಳ ಹಿಂದೆ ರಷ್ಯಾದಲ್ಲಿ (Russia) ಸಂಭವಿಸಿದ ಅಪಘಾತದಿಂದ ತಾನು ಲೈಂಗಿಕ ಕ್ರಿಯೆ ಹೊಂದಲು ಅಸಮರ್ಥನಾಗಿದ್ದೇನೆ (Incapable of Having Sex) ಎಂದು ವ್ಯಕ್ತಿ ಪತ್ನಿ ಬಳಿ ಹೇಳಿಕೊಂಡಿದ್ದು, ಸಣ್ಣ ಶಸ್ತ್ರ ಚಿಕಿತ್ಸೆ(Minor Surgery) ಮಾಡಿಸಿದರೆ ಸರಿಯಾಗಲಿದೆ ಎಂದು ಆರೋಪಿ ಹೇಳಿ ನಂಬಿಸಿದ್ದನು.
ಜನವರಿ 2020ರಲ್ಲಿ ತಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಲು ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿರುವುದಾಗಿ ತಿಳಿಸಿ ಕೋಲ್ಕತ್ತಾಗೆ ಹೋಗಿದ್ದರು. ಆದಾದ ಬಳಿಕ ಪುರುಷನಾಗಲು ಲಿಂಗ ಬದಲಾವಣೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿರುವುದಾಗಿ ಸತ್ಯ ಬಾಯ್ಬಿಟ್ಟಿದ್ದಾನೆ. ಆದರೆ ಶಸ್ತ್ರಚಿಕಿತ್ಸೆಯ ಬಗ್ಗೆ ಯಾವುದೇ ವಿವರಗಳನ್ನು ನೀಡಿಲ್ಲ. ಅಲ್ಲದೇ ತನ್ನೊಂದಿಗೆ “ಅಸ್ವಾಭಾವಿಕ ಲೈಂಗಿಕತೆ” (Unnatural Sex) ನಡೆಸಲು ಪ್ರಾರಂಭಿಸಿದನು. ಈ ಬಗ್ಗೆ ಎಲ್ಲದರೂ ಹೇಳಿದರೆ ಭಯಾನಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆಯೊಡ್ಡಿರುವುದಾಗಿ ಮಹಿಳೆ ಪೊಲೀಸರಿಗೆ ಹೇಳಿದ್ದಾಳೆ. ಇದೀಗ ದೆಹಲಿಯ (Delhi) ನಿವಾಸಿಯಾಗಿರುವ ಆರೋಪಿಯನ್ನು ಬಂಧಿಸಿ ವಡೋದರಾಕ್ಕೆ ಕರೆತರಲಾಗಿದೆ ಎಂದು ಗೋತ್ರಿ ಪೊಲೀಸ್ ಇನ್ಸ್ಪೆಕ್ಟರ್ (Gotri police inspector) ಎಂಕೆ ಗುರ್ಜರ್(MK Gurjar) ತಿಳಿಸಿದ್ದಾರೆ.