ಚಿತ್ರದುರ್ಗದ ರೇಣುಕಾಸ್ವಾಮಿ ಮರ್ಡರ್ ಪ್ರಕರಣದಲ್ಲಿ ಪೊಲೀಶರು ಸಾಕಷ್ಟು ತನಿಖೆ ನಡೆಸುತ್ತಿದ್ದಾರೆ. ಯಾವುದೇ ಒತ್ತಡಕ್ಕೂ ಮಣಿಯದ ಖಾಕಿ ಪಡೆ ಸಾಕಷ್ಟು ಮಾಹಿತಿಯನ್ನು ಕಲೆ ಹಾಕಿದೆ. ಪ್ರಕರಣದ ಸಂಬಂಧ ಹಾಸ್ಯನಟ ಚಿಕ್ಕಣ್ಣ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ಬೆನ್ನಲ್ಲೇ ಇದೀಗ ಮತ್ತೊಬ್ಬ ನಟನಿಗೆ ವಿಚಾರಣೆಯ ಭೀತಿ ಎದುರಾಗಿದೆ.
ಹೌದು. ಸ್ಟೋನಿ ಬ್ರೂಕ್ ಪಬ್ನಲ್ಲಿ ಚಿಕ್ಕಣ್ಣ ಅಲ್ಲದೇ ಇನ್ನೊಬ್ಬ ನಟನಿದ್ದ ವಿಚಾರ ಪೊಲೀಸರಿಗೆ ಗೊತ್ತಾಗಿದೆ. ಚಿಕ್ಕಣ್ಣ, ದರ್ಶನ್ ಬಿಟ್ಟು ಮತ್ತೊಬ್ಬ ನಟ ಇದ್ದರು. ಪಾರ್ಟಿ ನಂತರ ಚಿಕ್ಕಣ್ಣ ಮತ್ತು ಆ ನಟ ಇಬ್ರೂ ಒಟ್ಟಿಗೆ ತೆರಳಿದ್ದ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.
ದರ್ಶನ್ ಹಾಗೂ ಚಿಕ್ಕಣ್ಣ ಜೊತೆ ಪಾರ್ಟಿಯಲ್ಲಿ ಭಾಗಿಯಾಗಿದ್ದ ನಟ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರಂತೆ. ಇದೀಗ ಆ ನಟನಿಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸುವ ಸಾಧ್ಯತೆ ಇದೆ. ಇದರಿಂದ ಆ ನಟನಿಗೂ ಇದೀಗ ವಿಚಾರಣೆ ಭೀತಿ ಎದುರಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಸ್ಟೋನಿ ಬ್ರೂಕ್ ಪಬ್ನಲ್ಲಿ ಚಿಕ್ಕಣ್ಣ ಇದ್ದರು ಎಂಬ ಮಾಹಿತಿ ಮೇರೆಗೆ ಪೊಲೀಸರು ನಟನಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕೊಟ್ಟಿದ್ದರು. ಆದರೆ ನೋಟಿಸ್ಗೆ ಚಿಕ್ಕಣ್ಣ ಉತ್ತರಿಸಿರಲಿಲ್ಲ. ಬಳಿಕ ಸ್ಟೋನಿ ಬ್ರೂಕ್ ಪಬ್ನಲ್ಲಿ ಪೊಲೀಸರು ಸ್ಥಳ ಮಹಜರು ನಡೆಸಲು ತೆರಳಿದ್ದಾಗ ಚಿಕ್ಕಣ್ಣ ಅಲ್ಲಿದ್ದರು. ಹೀಗಾಗಿ ಅವರನ್ನು ಪೊಲೀಸರು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಕರೆತಂದು ಸರಿಸುಮಾರು ಮೂರೂವರೆ ಗಂಟೆಗಳ ಕಾಲ ನಿರಂತರವಾಗಿ ವಿಚಾರಣೆ ನಡೆಸಿದ್ದರು.