ಬಾಲಿವುಡ್ ನ ವಿವಾದಾತ್ಮಕ ನಟಿ ರಾಖಿ ಸಾವಂತ್ ಮತ್ತು ಪತಿ ಆದಿಲ್ ಖಾನ್ ದುರಾನಿ ನಡುವಿನ ಸಂಬಂಧ ಸಾಕಷ್ಟು ದಿನಗಳಿಂದ ಸದ್ದು ಮಾಡುತ್ತಿತ್ತು. ಪತಿ ಆದಿಲ್ ಖಾನ್ ಬಗ್ಗೆ ರಾಖಿ ಸಾಕಷ್ಟು ಗಂಭೀರ ಆರೋಪ ಮಾಡಿದ್ದು ಮದುವೆಯಾದ ಕೆಲ ಸಮಯದಲ್ಲೇ ಇಬ್ಬರು ದೂರ ದೂರವಾಗಿದ್ದರು. ಇದೀಗ ಆದಿಲ್ ಜೈಪುರದಲ್ಲಿ ರಹಸ್ಯವಾಗಿ ಮತ್ತೊಂದು ಮದುವೆಯಾಗಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ಆದಿಲ್ ಮಾರ್ಚ್ 2ರಂದು ಜೈಪುರದಲ್ಲಿ ‘ಬಿಗ್ ಬಾಸ್ ಹಿಂದಿ ಸೀಸನ್ 12′ ಸ್ಪರ್ಧಿ ಸೋಮಿ ಖಾನ್ ಅವರನ್ನು ಮದುವೆ ಆಗಿದ್ದಾರೆ ಎನ್ನಲಾಗುತ್ತಿದೆ. ಈ ಮದುವೆಯಲ್ಲಿ ಆಪ್ತರು ಮಾತ್ರ ಹಾಜರಿದ್ದರು. ಸೋಮಿ ಅವರು ಸಬಾ ಖಾನ್ ಅವರ ಸಹೋದರಿ. ಕಳೆದ ಕೆಲವು ತಿಂಗಳುಗಳಿಂದ ಆದಿಲ್ ಹಾಗೂ ಸೋಮಿ ಇಬ್ಬರೂ ತಮ್ಮ ಸಂಬಂಧವನ್ನು ರಹಸ್ಯವಾಗಿ ಇಟ್ಟಿದ್ದರು ಎನ್ನಲಾಗಿದೆ.
ಸಲ್ಮಾನ್ ಖಾನ್ ನಡೆಸಿಕೊಡುವ ‘ಬಿಗ್ ಬಾಸ್ ಹಿಂದಿ ಸೀಸನ್ 12’ರಲ್ಲಿ ಸೋಮಿ ಮತ್ತು ಸಬಾ ಖಾನ್ ಇಬ್ಬರೂ ಸ್ಪರ್ಧಿಗಳಾಗಿ ಭಾಗವಹಿಸಿದ್ದರು. ಈ ಇಬ್ಬರೂ ಸಹೋದರಿಯರು ಜೈಪುರದವರಾಗಿದ್ದು, ಸಿನಿಮಾದಲ್ಲಿ ಕೆಲಸ ಮಾಡಲು ಮುಂಬೈಗೆ ಬಂದಿದ್ದಾರೆ. ಸಬಾ ಮತ್ತು ಸೋಮಿ ಬಣ್ಣದ ಲೋಕದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಕೆಲವು ಮ್ಯೂಸಿಕ್ ವಿಡಿಯೋಗಳಲ್ಲೂ ನಟಿಸಿದ್ದಾರೆ. ಇದೀಗ ಆದಿಲ್ ಹಾಗೂ ಸೋಮಿ ಮದುವೆಯಾಗಿದ್ದು ಈ ಬಗ್ಗೆ ರಾಖಿ ಸಾವಂತ್ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಕಾದು ನೋಡಬೇಕಿದೆ.