ಬೆಂಗಳೂರು: ಹುಲಿ ಉಗುರು (Tiger Claw) ಪೆಂಡೆಂಟ್ ಪ್ರಕರಣದಲ್ಲಿ ಸ್ಯಾಂಡಲ್ವುಡ್ ನಟರ ಬಳಿಕ ಈಗ ರಾಜಕಾರಣಿಗಳಿಗೂ ಸಂಕಷ್ಟ ಶುರುವಾಗಿದೆ. ಕೆಲ ರಾಜಕಾರಣಿಗಳ ಆಪ್ತರು, ಮಕ್ಕಳು ಹುಲಿ ಉಗುರಿನ ಸುಳಿಯಲ್ಲಿ ಸಿಲುಕಿದ್ದಾರೆ.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್, ಹುಬ್ಬಳ್ಳಿ ಕಾಂಗ್ರೆಸ್ ಯುವ ನಾಯಕ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಂಬಂಧಿ ರಜತ್ ಉಳ್ಳಾಗಡ್ಡಿಮಠ ಮದುವೆ ವೇಳೆ ವ್ಯಾಘ್ರನಖ ಮಾದರಿ ಪೆಂಡೆಂಟ್ ಧರಿಸಿದ್ದ ಫೋಟೋಗಳು ವೈರಲ್ ಆಗಿವೆ. ಈ ವಿಚಾರದಲ್ಲಿ ಅರಣ್ಯ ಅಧಿಕಾರಿಗಳ ನಡೆ ಕುತೂಹಲ ಕೆರಳಿಸಿದೆ.
ವಿಜಯಪುರದ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ ಪುತ್ರನ ಕೊರಳಲ್ಲಿ ವ್ಯಾಘ್ರನಖ ಮಾದರಿ ಕಂಡುಬಂದ ಕಾರಣ ಅರಣ್ಯಾಧಿಕಾರಿಗಳು, ಅವರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಲಾಕೆಟ್ಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು.