ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಇವತ್ತು ಕೊನೆಯ ದಿನವಾಗಿರುವುದರಿಂದ ಈಗಾಗಲೇ ಎಲ್ಲಾ ಅಭ್ಯರ್ಥಿ ತಮ್ಮ ನಾಮಪತ್ರವನ್ನ ಸಲ್ಲಿಸಿದ್ದು ಹಾಗೇಯೆ ಇವತ್ತು ನಿಪ್ಪಾಣಿ ಮತಕ್ಷೇತ್ರದ ವಿಧಾನಸಭೆ ಚುನಾವಣೆಗೆ ಸಚಿವೆ ಶಶಿಕಲಾ ಜೋಲ್ಲೆ ಉಮೇದುವಾರಿಕೆ ಸಲ್ಲಿಸಿದ್ದಾರೆ.ನಿಪ್ಪಾಣಿಯಲ್ಲಿ ಸಚಿವೆ ಶಶಿಕಲಾ ಜೋಲ್ಲೆ ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ,ಸಂಸದ ಅಣ್ಣಾಸಾಹೇಬ್ ಜೋಲ್ಲೆ ಸೇರಿದಂತೆ ವಿವಿಧ ನಾಯಕರೂ ಕೂಡಾ ಸಾಥ್ ನೀಡಿದ್ದಾರೆ.ಹಾಗೇಯೆ ಈ ಬಾರಿ ಮತ್ತೆ ಬಿಜೆಪಿ ಸರಕಾರ ರಚನೆ ಮಾಡಲು ಹಲವು ದಿನಗಳಿಂದ ಸಚಿವೆ ಶಶಿಕಲಾ ಜೊಲ್ಲೆ ಅವರು ಮತಭೇಟೆ ನಡೆಸಿದ್ದು ಇನ್ನು ಕೆಲವು ದಿನಗಳು ಮಾತ್ರ ಬಾಕಿ ಇದ್ದು,
ನಿಪ್ಪಾಣಿ ಮತಕ್ಷೇತ್ರದಲ್ಲಿ ಈಗಾಗಲೇ ಪ್ರತಿ ಮನೆ ಮನೆಗೆ ಭೇಟಿ ನೀಡಿ ಮತಯಾಚನೆ ನಡೆಸಿದ್ದಾರೆ.ಇದೇ ಸಂದರ್ಭದಲ್ಲಿ ಸಾಕಷ್ಟು ತಮ್ಮ ಬೆಂಬಲಿಗ ರೊಂದಿಗೆ ಇವತ್ತಿನಿಂದ ಮತ್ತೆ ಮತಯಾಚನೆ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.ಇನ್ನು ಸಚಿವೆ ಶಶಿಕಲಾ ಜೊಲ್ಲೆ ಅವರು ನಾಮಪತ್ರ ಸಲ್ಲಿಕೆ ಆದ ಬಳಿಕ ಗ್ರಾಮಗಳಿಗೆ ಭೇಟಿ ಮತಯಾಚನೆ ನಡೆಸಿದ್ದು ಇನ್ನು ಬಿಜೆಪಿ ಪ್ರಮುಖ ನಾಯಕರು ಕೂಡಾ ಮತಯಾಚನೆಯಲ್ಲಿ ಪಾಲ್ಗೊಳ್ಳುತ್ತಾರೆ ಎನ್ನುವುದು ತಿಳಿದು ಬಂದಿದ್ದು ಹಾಗೇಯೆ ಸಾಥ ನೀಡಿದ ಬಿಜೆಪಿ ನಾಯಕರಿಗೆ ಎಲ್ಲಾ ಮತದಾರರಿಗೆ ಅಭಿನಂದನೆ ಸಲ್ಲಿದ್ದಾರೆ.ಈ ಬಾರಿ ಮತ್ತೆ ಬಿಜೆಪಿ ಅಭ್ಯರ್ಥಿ ಗೆಲುವು ಖಚಿತ ಎಂದು ಸಚಿವೆ ಶಶಿಕಲಾ ಜೊಲ್ಲೆ ತಿಳಸಿದ್ದಾರೆ.