ಇಲ್ಲೊಬ್ಬ ವ್ಯಕ್ತಿ ಬ್ರೇಕಪ್ ಆದ ನಂತರ ಮಾಜಿ ಗರ್ಲ್ ಫ್ರೆಂಡ್ ಬಳಿಯಿಂದ ಖರ್ಚಾದ ಹಣವನ್ನು (Money) ವಾಪಾಸ್ ಕೇಳಿದ್ದಾನೆ. ಆಸ್ಟ್ರೇಲಿಯದ ಅಡಿಲೇಡ್ನಲ್ಲಿ ವಾಸಿಸುವ ಆಯ್ಲೆ ತನ್ನ ಸಂಗಾತಿ ಅಲೆಕ್ಸ್ನೊಂದಿಗೆ ಸಂಬಂಧ ಹೊಂದಿದ್ದಳು. ಇತ್ತೀಚಿಗಷ್ಟೇ ಆತನಿಂದ ದೂರವಾಗಿದ್ದಳು. ಸ್ಪಲ್ಪ ದಿನಗಳ ನಂತರ ಆಕೆಗೆ ಮಾಜಿ ಬಾಯ್ಫ್ರೆಂಡ್ ಆಕೆಗೆ ಖರ್ಚು ಮಾಡಿದ ಹಣದ ಲಿಸ್ಟ್ನ್ನು ಕಳುಹಿಸಿಕೊಟ್ಟಿದ್ದಾನೆ. ಮಾತ್ರವಲ್ಲ ಅದರಲ್ಲಿ ಅರ್ಧ ಹಣವನ್ನು ಪಾವತಿಸುವಂತೆ ಹೇಳಿದ್ದಾನೆ.
ಇದನ್ನು ಉಲ್ಲೇಖಿಸಿ ಆಯ್ಲೆ ಟಿಕ್ಟಾಕ್ನಲ್ಲಿ ವೀಡಿಯೊವನ್ನು ಅಪ್ಲೋಡ್ ಮಾಡಿದ್ದಾಳೆ. ಮಾತ್ರವಲ್ಲ ತಮ್ಮ ಸಂಬಂಧದ ಸಮಯದಲ್ಲಿ ತನಗಾಗಿ ಖರ್ಚು ಮಾಡಿದ ಎಲ್ಲಾ ಖರ್ಚುಗಳನ್ನು ಒಳಗೊಂಡಿರುವ ದೀರ್ಘ ಪಟ್ಟಿಯ ಫೋಟೋವನ್ನು ಅಪ್ಲೋಡ್ ಮಾಡಿದ್ದಾಳೆ. ಈ ಪಟ್ಟಿಯಲ್ಲಿ ಇಂಧನ, ಆಹಾರ, ನೀರು ಮತ್ತು ಸಿನಿಮಾ ಟಿಕೆಟ್ಗಳ ವೆಚ್ಚವೂ ಸೇರಿದೆ. ಈಗ, ಅಲೆಕ್ಸ್ ತನ್ನ ಮಾಜಿ ಗೆಳತಿ ಒಟ್ಟಿಗೆ ಇಲ್ಲದ ಕಾರಣ ಅರ್ಧದಷ್ಟು ಖರ್ಚನ್ನು ಆಕೆ ಪಾವತಿಸಲು ಬಯಸುತ್ತಾನೆ.